ಆಲೂರು : ಸ್ವಾತಂತ್ರ್ಯ ಸೇನಾನಿ ಐ ಎನ್ ಏ ರಾಮರಾವ್ ರವರ ಪುಣ್ಯಸ್ಮರಣ ದಿನದ ಅಂಗವಾಗಿ ಭಾರತ ಸೇವಾದಳ ಹಾಸನ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ವರದರಾಜುರವರು ನೀಡಿದ ಸಮವಸ್ತ್ರವನ್ನು ಆಲೂರು ತಾಲೂಕಿನ ಮರಸು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 36 ವಿದ್ಯಾರ್ಥಿಗಳಿಗೆ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಪ್ರಾಧಿಕಾರದ ದಾಕ್ಷಾಯಿಣಿ ರವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಆಲೂರು ತಾಲೂಕು ಸಮಿತಿಯ ಪದಾಧಿಕಾರಿಗಳಾದ ಅಧ್ಯಕ್ಷರು ಬಾಲಕೃಷ್ಣರವರು ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಎಸ್ ಎಸ್ ಶಿವಮೂರ್ತಿಯವರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಭಾರತ ಸೇವಾದಳ ತಾಲೂಕ್ ಸಮಿತಿಯ ಸದಸ್ಯರು ಆದ ಗೋಪಾಲಕೃಷ್ಣ ರವರು ಮತ್ತು ವಲಯ ಸಂಘಟಕರಾದ ರಾಣಿ ವಿ ಎಸ್ ರವರು ಮತ್ತು ಮೆಡಿಕಲ್ ಕಾಲೇಜಿನ ವೈದ್ಯರಾದ ಸಂತೋಷ್ ಕುಮಾರ್ ರವರು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯದರ್ಶಿಗಳಾದ ರಘು ಪಾಳ್ಯರವರು ಹಾಗೂ ಹಿರಿಯ ಮುಖಂಡರಾದ ಕಣದಹಳ್ಳಿ ಮಂಜಣ್ಣ ಅವರು ಮತ್ತು ಮಲ್ಲಿಕಾರ್ಜುನ್ ರವರು ಹಾಗೂ ಹಿಮ್ಸ್ ಮೆಡಿಕಲ್ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ನಿಶ್ಚಿತಾ ಕುಮಾರಿಯವರು ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜಶೇಖರ್ ರವರು ಗ್ರಾಮದ ಮುಖ್ಯಸ್ಥರಾದ ಹಾಲಪ್ಪರವರು ಮತ್ತು ಊರಿನ ಇತರೆ ಎಲ್ಲಾ ಗ್ರಾಮಸ್ಥರು ಹಾಗೂ ಎನ್ಎಸ್ಎಸ್ ಶಿಬಿರಾರ್ಥಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *