
ಸಕಲೇಶಪುರ : ಸ್ವಾಮಿಯ ದಿವ್ಯ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಜರುಗಿದ್ದು ಇದರ ಅಂಗವಾಗಿ ಪುರಸಭೆ ವತಿಯಿಂದ ನಡೆಯುವ ಸಕಲೇಶಪುರ ಜಾತ್ರಾಮಹೋಹತ್ಸವವನ್ನು ಪಟ್ಟಣದ ಹೇಮಾವತಿ ಸೇತುವೆ ಪಕ್ಕದಲ್ಲಿರುವ ಕೃಷಿ ಜಾಗವಾದ ಗದ್ದೆಗೆ ಮಣ್ಣು ಸುರಿದ ಮಳಲಿ ಲೇ ಔಟ್ ಜಾಗದಲ್ಲಿ ಜಾತ್ರೆ ನಡೆಸಬಾರದು ಎಂದು ಕೆಲವು ಸಂಘಟನೆಗಳು ವಿರೋದ ವ್ಯಕ್ತಪಡಿಸಿದ್ದವು
ಇಷ್ಟೆಲ್ಲಾ ಗೊಂದಲದ ನಡುವೆಯೂ ಪುರಸಭೆ ಆಡಳಿತ ಜಾತ್ರೆ ನಡೆಸಲು ನಿರ್ದರಿಸಿದ ಹಿನ್ನಲೆಯಲ್ಲಿ ಸಂಘಟನೆಯ ಮುಖಂಡರೊಬ್ಬರು ಜಾತ್ರೆ ನೆಡಸದಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಇಂದು ರಾಜ್ಯ ಉಚ್ಚನ್ಯಾಯಾಲಯವು ಜಾತ್ರೆಯಲ್ಲಿ ಅಳವಡಿಸಿರುವ ಜಾಯಿಂಟ್ ವೀಲ್, ಕೊಲಂಬಸ್, ಹಾಗೂ ಟೊರೊ ಟೊರೊ ಗಳು ಚಾಲನೆ ಮಾಡದಂತೆ ಮುಂದಿನ ಆದೇಶದ ವರೆಗೆ ತಡೆಯಾಜ್ಞೆ ನೀಡಿದೆ.
