ಸಕಲೇಶಪುರ : ದಿನಾಂಕ 24-02-24 ರಂದು ಸಕಲೇಶಪುರದ ಐತಿಹಾಸಿಕ ಸಕಲೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವದ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಆಗಿದ್ದು. ತಾಲ್ಲೂಕಿನ ಪ್ರಥಮ ಪ್ರಜೆ ಮಾನ್ಯ ಶಾಸಕರಾದ ಸಿಮೆಂಟ್ ಮಂಜು ಅವರಿಗೆ ರಥ ಏಳಿಯಲು ಬಿಡದೆ ಸಮಯಕ್ಕೆ ಮೊದಲೇ ರಾಜಕೀಯ ಮಾಡಿ ಬೇರೆಯವರ ಹಸ್ತ ದಿಂದ ರಥ ಎಳೆಸಿರುವುದು ವ್ಯವಸ್ಥಾಪನಾ ಸಮಿತಿ ನಿಯಮ ಉಲ್ಲಂಘನೆ ಮಾಡಿದ್ದು ವ್ಯವಸ್ಥಾಪನ ಸಮಿತಿ ಮಾಡಿರುವ ಷಡ್ಯಂತ್ರವಾಗಿದೆ.

ಈ ಷಡ್ಯಂತ್ರ ಇಡಿ ಸಕಲೇಶಪುರ ಜನತೆಗೆ ಮಾಡಿದ ಅವಮಾನವಾಗಿದ್ದು ತನಿಖೆ ನಡೆಸಿ ವ್ಯವಸ್ಥಾಪನಾ ಸಮಿತಿಯನ್ನು ವಜಾ ಮಾಡಬೇಕೆಂದು ಸಕಲೇಶಪುರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಸಕಲೇಶ್ವರ ಸ್ವಾಮಿ ರಥೋತ್ಸವ ಒಂದು ಐತಿಹಾಸಿಕ ದೇವಸ್ಥಾನದ ಜೊತೆಗೆ ರಥ ನಿರ್ಮಾಣ ಆಗಿ 50 ವರ್ಷವಾಗಿದ್ದು ಪ್ರತಿ ವರ್ಷ ನಿಯಮದಂತೆ ತಾಲ್ಲೂಕಿನ ಪ್ರಥಮ ಪ್ರಜೆ ಶಾಸಕರು ರಥ ಏಳಿಯುವ ಪ್ರತೀತಿಯಿದೆ ಆದರೂ ಉದ್ದೇಶ ಪೂರ್ವಕವಾಗಿ ವ್ಯವಸ್ಥಾಪನಾ ಸಮಿತಿ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ ದುರುದ್ದೇಶದಿಂದ ಷಡ್ಯಂತ್ರ ಮಾಡಿದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಮಾನ್ಯ ಶಾಸಕರು ಸರಿಯಾದ ಸಮಯಕ್ಕೆ ಬಂದರು ಸಹ ಅದಕ್ಕಿಂತ ಮೊದಲೇ ರಥ ಎಳೆದಿರುವುದು ಅಧಿಕಾರಿಗಳ ನಿರ್ಲಕ್ಷ್ಯವು ಸಹ ಕಂಡುಬಂದಿದೆ. ಎಂದು ಪ್ರತಿಭಟನೆಕಾರರು ಆರೋಪಿಸಿದರು.

24-02-2024 ರಂದು ಸಕಲೇಶಪುರದ ಸಕಲೇಶ್ವರಸ್ವಾಮಿ ದೇವಸ್ಥಾನದ ದಿವ್ಯಾ ರಥಕ್ಕೆ ಪೂಜೆ ಮಾಡಿ ಚಾಲನೆ ನೀಡಲಾಗುವುದು ಎಂದು ಮತ್ತು ನಿಗದಿತ ಸಮಯ ಬೆಳಗ್ಗೆ 11.45 ಕ್ಕೆ ಎಂದು ವ್ಯವಸ್ಥಾಪನಾ ಸಮಿತಿ ಸಮಯ ಘೋಷಣೆ ಮಾಡಿತ್ತು. ಆದರೆ ಮೊದಲೇ 11.34 ಕ್ಕೆ ಶಾಸಕರು ಬರುವ ಮೊದಲೇ ರಥಕ್ಕೆ ಚಾಲನೆ ನೀಡಿ ಮುಂದಕ್ಕೆ ಏಳೆದಿರುವುದು ಕಾನೂನು ಉಲ್ಲಂಘನೆ ಆಗಿದೆ.

ದಿನಾಂಕ 24-02-2024 ರಂದು ಮುಜರಾಯಿ ನಿಯಮಗಳನ್ನು ಉಲ್ಲಂಘನೆ ಮಾಡಿ ಒಂದು ರಾಜಕೀಯ ಪಕ್ಷದ ಏಜೆಂಟರಂತೆ ವರ್ತನೆ ಮಾಡಿ ಶಾಸಕರಿಗೆ ಅವಮಾನ ಮಾಡಿರೋದು ಖಂಡಿಸುತ್ತೇವೆ. ಹಾಗೆಯೇ ಸಕಲೇಶ್ವರ ಸ್ವಾಮಿ ದೇವಸ್ಥಾನದ ಸರ್ಕಾರ ನೇಮಿಸಿರುವ ವ್ಯವಸ್ಥಾಪನಾ ಸಮಿತಿ ವಜಾ ಮಾಡಲು ಸಂಬಂಧಪಟ್ಟ ಇಲಾಖೆಗೆ ಆದೇಶಿಸಬೇಕು ಎಂದು ಈ ಮನವಿ ಮೂಲಕ ಕೇಳಿಕೊಳ್ಳುತ್ತೇವೆ. ಎಂದು ಪ್ರತಿಭಟನಕಾರರು ಮಾನ್ಯ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ರಘು ಸಕಲೇಶಪುರ. ತಾಲ್ಲೂಕಿನ ಪದಾಧಿಕಾರಿಗಳಾದ ಮಂಜುನಾಥ್ ಕಬ್ಬಿನ ಗದ್ದೆ. ದುಷ್ಯಂತ್ ಗೌಡ. ಶಿವು ಜಿಪ್ಪಿ. ಇತರರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed