
ಸಕಲೇಶಪುರ : ತಾಲೂಕಿನ ವಿದ್ಯುತ್ ಇಲಾಖೆ (ಚೆಸ್ಕಾಂ) ವಿಭಾಗಕ್ಕೆ ವಿಶಾಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಠಿಣ ಜವಾಬ್ದಾರಿ ಇದ್ದು, ದಟ್ಟ ಮಲೆನಾಡು, ಅರೆಮಲೆನಾಡು ,ಬಯಲು ಪ್ರದೇಶರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ,ಹೀಗೆ ಹಲವು ಭೌಗೋಳಿಕ ಪರಿಸರದಲ್ಲಿ ವಿದ್ಯುತ್ ಪ್ರಸರಣ ನಿರ್ವಹಣೆ ಮಾಡುವ ಸವಾಲು ಈ ವಿಭಾಗಕ್ಕೆ ಇದೆ.
ಮಾನವ – ವನ್ಯಜೀವಿ (ಆನೆ) ಸಂಘರ್ಷದ ವಿಚಾರ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ.ಕಾಫಿ ತೋಟ ಹಾಗೂ ಅರಣ್ಯದ ನಡುವೆ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ ಗಳ ನಿರ್ವಹಣೆ ಬಹಳ ಕಠಿಣ ಕೆಲಸ.ವಿಪರೀತ ಮಳೆ-ಗಾಳಿ ಸಂಧರ್ಭದಲ್ಲಿ ಹಾಗೂ ಆನೆಯಂತಹ ಪ್ರಾಣಿಗಳು ವಿದ್ಯುತ್ ಕಂಬ ಅಥವಾ ವೈರ್ ಅನ್ನು ಜಖಂ ಗೊಳಿಸಿದ ಸಮಯದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಾಗುವ ಸಹಸ್ರಾರು ಬೃಹತ್ ವಾಹನಗಳು ವಿದ್ಯುತ್ ಕಂಬಗಳಿಗೆ ಹಾನಿ ಮಾಡಿದಾಗ ಇವುಗಳ ದುರಸ್ಥಿ ಬಹಳ ಕಠಿಣ ವಾಗಿರುತ್ತದೆ.
ಮಲೆನಾಡಿನ ಗುಡ್ದಗಾಡು ಪ್ರದೇಶಗಳಲ್ಲಿ ಗಾಳಿ ಮಳೆ ಸಂದರ್ಭದಲ್ಲಿ ದಿನನಿತ್ಯ ವೈರು ಹಾಗೂ ಕಂಬಗಳನ್ನು ಬದಲಾಯಿಸಿ ವಿದ್ಯುತ್ ಸರಬರಾಜು ಮಾಡಬೇಕಾಗಿರುತ್ತದೆ.
ಇಷ್ಟು ವಿಶಾಲ ವ್ಯಾಪ್ತಿಯ ಈ ವಿಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ಸರಬರಾಜು ಆಗುವ ವಿದ್ಯುತ್ ಕಂಬಗಳನ್ನು ವಾಹನದಿಂದ ಇಳಿಸುವ ಕೆಲಸಕ್ಕೆ ಹಾಗೂ ಮತ್ತೆ ವಾಹನಕ್ಕೆ ಲೋಡ್ ಮಾಡುವ ಸಂದರ್ಭದಲ್ಲಿ ಹತ್ತಾರು ಸಂಖ್ಯೆಯ ಸಿಬ್ಬಂದಿಗಳ ಅಗತ್ಯ ಬೀಳುತ್ತದೆ. ಹಾಗಾಗಿ ವಿದ್ಯುತ್ ಸರಬರಾಜು ಹಾಗೂ ನಿರ್ವಹಣೆ ಕಾರ್ಯಕ್ಕೆ ಸಿಬ್ಬಂದಿಗಳ ತೀವ್ರ ಕೊರತೆ ಉಂಟಾಗಿದೆ.
ಆಶ್ಚರ್ಯವೆಂದರೆ ಈ ವರೆಗೂ ಯಾವ ಮೇಲಾಧಿಕಾರಿಗಳಿಗೂ ಕೂಡ ಈ ವಿಭಾಗಕ್ಕೆ ಒಂದು ಕ್ರೇನ್ ಹಾಗೂ ಕಂಬ ಸ್ಥಾಪಿಸಲು ಗುಂಡಿ ತೆಗೆಯುವ ಡಿಗ್ಲರ್ ಯಂತ್ರವನ್ನು ಮಂಜೂರು ಮಾಡಿದರೆ ಈ ಭಾಗದ ಜನರಿಗೆ ಉತ್ತಮ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡಿದಂತಾಗುತ್ತದೆ.
ಈಗ ಖಾಸಗಿ ಕ್ರೇನ್ ಹಾಗೂ ಡಿಗ್ಗರ್ ಯಂತ್ರಗಳನ್ನು ಅವಲಂಬಿಸಿ ಕೆಲಸ ಮಾಡಲಾಗುತ್ತಿದೆ.ಸೂಕ್ತ ಸಮಯಕ್ಕೆ ಈ ಖಾಸಗಿ ಯಂತ್ರಗಳು ಆಗಮಿಸದೆ ದಿನಗಟ್ಟಲೆ ವಿದ್ಯುತ್ ಸರಬರಾಜಿನಲ್ಲಿ ಏರುಪೇರು ಉಂಟಾಗುತ್ತಿದೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡು ಸಕಲೇಶಪುರ ವಿಭಾಗಕ್ಕೆ ಸದರಿ ಯಂತ್ರಗಳನ್ನು ಮಂಜೂರು ಮಾಡಬೇಕೆಂದು ಕರವೇ ಅಧ್ಯಕ್ಷ ರಮೇಶ್ ಪೂಜಾರಿ (ಪ್ರವೀಣ್ ಶೆಟ್ಟಿ ಬಣ) ಒತ್ತಾಯ ಪಡಿಸುತ್ತದೆ.
