ಸಕಲೇಶಪುರ : ರೈತ ನಾಯಕ, ಸಂಘಟನೆಗೆ ಶಕ್ತಿ ತುಂಬಿದ ನಾಯಕರಿಗೆ 82 ನೇ ಜನ್ಮ ದಿನಾಚರಣೆ ಆಚರಿಸುತ್ತಿದ್ದು, ಆರೋಗ್ಯ ಹಾಗೂ ನಾಡನ್ನು ನಡೆಸುವ ಶಕ್ತಿ ದೇವರು ಕೊಡ್ಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಹೇಳಿದರು.
ಮಂಗಳವಾರ ಬಿ. ಎಸ್ ಯಡಿಯೂರಪ್ಪ ನವರ ಜನ್ಮ ದಿನಾಚರಣೆಯ ಪ್ರಯುಕ್ತ ನಗರದ ಎನ್. ಕೆ ಗಣಪಯ್ಯ ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಹಾಗೂ ಸಿಹಿ ವಿತರಿಸಿ ಮಾತನಾಡಿದರು.
ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರಾಗಿ, ರೈತರು ಹಾಗೂ ಕಾರ್ಮಿಕರ ಹೋರಾಟಗಳನ್ನು ಜೀವನದ ಉಸಿರಾಗಿಸಿಕೊಂಡವರು. ಬಿಜೆಪಿಯು ಪ್ರತಿಪಾದಿಸುವ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದರೂ ಎಂದಿಗೂ ಇತರೆ ಸಮುದಾಯಗಳನ್ನು ಧ್ವೇಷಿಸಿದವರಲ್ಲ. ತಮ್ಮ ಬೆಂಬಲಿಗರನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ಅಚಲ ವಿಶ್ವಾಸವನ್ನು ಮೂಡಿಸಿದ ವ್ಯಕ್ತಿ.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತಿನಂತೆಯೇ ಅಕ್ಷರಶಃ ಗುಡುಗುವುದು ಯಡಿಯೂರಪ್ಪ ಅವರ ಸ್ವಭಾವ ಎಂದು ಹೇಳಿದರು.
ಮಾಜಿ ಮಂಡಲ ಅಧ್ಯಕ್ಷ ಡಿ. ರಾಜ್ ಕುಮಾರ್ ಮಾತನಾಡಿ ಯಡಿಯೂರಪ್ಪ ಒಬ್ಬ ಹುಟ್ಟು ಹೋರಾಟಗಾರ,ರಾಜಕೀಯವಾಗಿ ಎಷ್ಟೇ ಅಡೆತಡೆಗಳು ಎದುರಾದರು ಛಲ ಬಿಡದೆ ಮುನ್ನುಗುವ ನಾಯಕ ಎಂಬುವುದರಲ್ಲಿ ಸಂಶಯವಿಲ್ಲ ಇನ್ನು ಅಜಾತ ಶತ್ರುಗೆ ದೇವರು ಇನ್ನಷ್ಟು ಅರೋಗ್ಯ ಆಯಸ್ಸು ನೀಡಲಿ ಎಂದು ಆಶಿಸುತ್ತೇನೆ. ಇದೆ ವೇಳೆ ಯಡಿಯೂರಪ್ಪ ನೆಡೆದು ಬಂದ ಹಾದಿ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಪ್ರದೀಪ್, ವನಜಾಕ್ಷಿ, ರೇಖಾ ರುದ್ರಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಾಲರಾಜ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಪ್ರತಿಭಾ ಮಂಜುನಾಥ್, ಪ್ರಾಂಶುಪಾಲ ಲೋಕೇಶ್ ಬಿಜೆಪಿ ಮುಖಂಡರಾದ ಎ. ವಿ ನರೇಶ್,ದೊಡ್ಡದಿಣ್ಣೆ ಜೈ ಪ್ರಕಾಶ್,ಅಶ್ವಥ್ ವಳಲಹಳ್ಳಿ, ಸುದೀಶ್,ರಘು ಗೌಡ, ಮೇಘರಾಜ್, ಅರೆಕೆರೆ ಇಂದನ್, ವನಜಾಕ್ಷಿ ಸೇರಿದಂತೆ ಮುಂತಾದವರಿದ್ದರು.