ಬಿಜೆಪಿ ಸರ್ಕಾರದ ಬಹುತೇಕ ಸಚಿವರಿಗೆ ಸೋಲು; ಇಲ್ಲಿದೆ ವಿವರ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಸರ್ಕಾರದಲ್ಲಿನ ಬಹುತೇಕ ಸಚಿವರಿಗೆ ಸೋಲಾಗಿದೆ. ಆಡಳಿತ ವಿರೋಧಿ ಅಲೆ ಭಾರಿ ಪೆಟ್ಟನ್ನು ಬಿಜೆಪಿ ನಾಯಕರಿಗೆ ನೀಡಿದೆ.ಸಚಿವರುಗಳ ಫಲಿತಾಂಶಗೋವಿಂದ ಕಾರಜೋಳ- ಸೋಲು (ಮಧೋಳ್)ಕೆ.ಎಸ್.ಈಶ್ವರಪ್ಪ – ಟಿಕೆಟ್ ಸಿಕ್ಕಿಲ್ಲ. (ಶಿವಮೊಗ್ಗ)ಅಶೋಕ್- ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕನಕಪುರ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದರೆ, ತಮ್ಮ ಸಂಪ್ರದಾಯಿಕ ಕ್ಷೇತ್ರವಾದ ಪದ್ಮರಾಜನಗರ ಕ್ಷೇತ್ರದಲ್ಲಿ ಗೆದ್ದಿದ್ದಾರೆ.ಬಿ.ಶ್ರೀರಾಮುಲು – ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸೋಲುವಿ.ಸೋಮಣ್ಣ- ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿಯೂ ಸೋತಿದ್ದಾರೆ.ಎಸ್.ಅಂಗಾರ- ಟಿಕೆಟ್ ಸಿಕ್ಕಿರಲಿಲ್ಲ. (ಸುಳ್ಯ)ಜೆ.ಸಿ.ಮಾಧುಸ್ವಾಮಿ – ಸೋಲು (ಚಿಕ್ಕನಾಯಕನಹಳ್ಳಿ)ಆರಗ ಜ್ಞಾನೇಂದ್ರ- ಗೆಲುವು (ತೀರ್ಥಹಳ್ಳಿ)ಸಿ.ಅಶ್ವತ್ಥ್ ನಾರಾಯಣ- ಗೆಲುವು (ಮಲ್ಲೇಶ್ವರಂ)ಸಿ.ಸಿ.ಪಾಟೀಲ್- ಗೆಲುವು (ನರಗುಂದ)ಆನಂದ್ ಸಿಂಗ್- ಟಿಕೆಟ್ ಸಿಕ್ಕಿರಲಿಲ್ಲ, ಆದರೆ ಪುತ್ರ ಸೋತಿದ್ದಾರೆ. (ವಿಜಯನಗರ)ಕೋಟ ಶ್ರೀನಿವಾಸ ಪೂಜಾರಿ- ಟಿಕೆಟ್ ಇಲ್ಲ, ಬಿಜೆಪಿ ಅಭ್ಯರ್ಥಿಗೆ ಗೆಲುವು. (ಕುಂದಾಪುರ)ಪ್ರಭು ಚೌವ್ಹಾಣ್- ಗೆಲುವು (ಔರಾದ್)ಮುರುಗೇಶ್ ನಿರಾಣಿ- ಸೋಲು (ಬೀಳಗಿ)ಶಿವರಾಮ್ ಹೆಬ್ಬಾರ್- ಗೆಲುವು (ಯಲ್ಲಾಪುರ)ಎಸ್.ಟಿ.ಸೋಮಶೇಖರ್ – ಗೆಲುವು (ಯಶವಂತಪುರ)ಬಿ.ಸಿ.ಪಾಟೀಲ್- ಸೋಲು (ಹಿರೇಕೆರೂರು)ಭೈರತಿ ಬಸವರಾಜ್- ಗೆಲುವು (ಕೆ.ಆರ್.ಪುರ)ಡಾ.ಕೆ.ಸುಧಾಕರ್- ಸೋಲು (ಚಿಕ್ಕಬಳ್ಳಾಪುರ)ಕೆ.ಗೋಪಾಲಯ್ಯ- ಗೆಲುವು (ಮಹಾಲಕ್ಷ್ಮಿಲೇಔಟ್)ಶಶಿಕಲಾ ಜೊಲ್ಲೆ- ಗೆಲುವು ( ನಿಪ್ಪಾಣಿ)ಎಂಟಿಬಿ ನಾಗರಾಜ್- ಸೋಲು (ಹೊಸಕೋಟೆಕೆ.ಸಿ.ನಾರಾಯಣಗೌಡ- ಸೋಲು (ಕೆ.ಆರ್.ಪೇಟೆ)ಬಿ.ಸಿ.ನಾಗೇಶ್- ಸೋಲು (ತಿಪಟೂರು)ವಿ.ಸುನೀಲ್ ಕುಮಾರ್- ಗೆಲುವು (ಕಾರ್ಕಳ)ಹಾಲಪ್ಪ ಆಚಾರ್- ಸೋಲು (ಯಲಬುರ್ಗ)ಶಂಕರ್ ಬಿ.ಪಾಟೀಲ್ ಮನೇಕೊಪ್ಪ – ಸೋಲು (ನವಲಗುಂದ)ಮುನಿರತ್ನ- ಗೆಲುವು (ರಾಜರಾಜೇಶ್ವರಿನಗರ)