ಕನ್ನಡ ಸಾಹಿತ್ಯ ಪರಿಷತ್ತು ,ರೋಟರಿ ಸಂಸ್ಥೆ ಸಕಲೇಶಪುರ ,ಯದುನಂದನ ಪ್ರಕಾಶನ ಇವರ ಸಹಯೋಗದೊಂದಿಗೆ ಯುವ ಸಾಹಿತಿ ಗಿರೀಶ್ ಕುಮಾರ್ ಹೆಚ್.ಆರ್. (ಸತ್ಯರಂಗಸುತ )ರವರ ನಿರೀಕ್ಷೆ ಕವನ ಸಂಕಲನ ಮತ್ತು “ಬನ್ನಿ ಒಮ್ಮೆ ಪ್ರಯತ್ನಿಸೋಣ ” ಲೇಖನ ಸಂಕಲನ ಕೃತಿಗಳ ಬಿಡುಗಡೆ ಸಮಾರಂಭವು ರೋಟರಿ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ 4 ಘಂಟೆಗೆ ನಡೆಯಿತು.ಈ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ, ಜಾನಪದ ಕಲಾವಿದರಾದ ಅಪ್ಪಗೆರೆ ತಿಮ್ಮರಾಜು, ರಂಗ ಕರ್ಮಿ ರಕ್ಷಿದಿ ಪ್ರಸಾದ್, ಜಾವಗಲ್ ಪ್ರಸನ್ನ ಕುಮಾರ್, ಚಲಂ ಹಾಡ್ಲಹಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜು, ಪತ್ರಕರ್ತರು ಹಾಗೂ ರೋಟರಿ ಸಂಸ್ಥೆಯ ಕಾರ್ಯದರ್ಶಿ ಜಾನೆಕೆರೆ ಆರ್ ಪರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಗಿರೀಶ್ ಅವರ ತಂದೆ ರಂಗನಾಥ್, ಇಓ ಆರ್,.ರಾಮಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಯೋಗೀಶ್, ಎಸ್.ಡಿ.ಆದರ್ಶ್, ಖಜಾಂಚಿ ನಲ್ಲುಲಿ ಸತಿಶ್, ಮಿನಾಕ್ಷಿ ಖಾದರ್, ಚನ್ನವೇಣಿ ಎಂ ಶೆಟ್ಟಿ, ಇತರರು ಇದ್ದರು.