*ಇಂದಿನ ಕಾಡಾನೆ ಕಾರ್ಯಾಚರಣೆ ಹೋರಾಟಗಾರರಿಗೆ ಸಿಕ್ಕ ಜಯವೇ ಹೊರತು, ಶಾಸಕರ ಸಾಧನೆಯಲ್ಲ ಮಲೆನಾಡು ರಕ್ಷಣಾ ಸೇನೆ ತಾಲ್ಲೂಕು ಅಧ್ಯಕ್ಷ ಸತೀಶ್ ಬೋಲ್ಟ್ ಹೇಳಿಕೆ..!*ಇದು ಒಂದೇ ದಿನದಲ್ಲಿ ಶಾಸಕರಾಗಿ ಆಗಿರುವ ಸಾಧನೆ ಅಲ್ಲ ಯಡೇಹಳ್ಳಿ ಮಂಜುನಾಥ್, ಸಾಗರ್ ಜಾನೇಕೆರೆ, ಹುರುಡಿ ವಿಶ್ವನಾಥ್, ಸಾಮಾಜ ಸೇವಕ ಸುರೇಶ್ ಆಳ್ವ ರಂತಹ ಅದೆಷ್ಟೋ ಹೋರಾಟಗಾರರು ಮತ್ತು ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು, ಬೆಳೆಗಾರರ ಸಂಘ ಸೇರಿದಂತೆ ಹತ್ತು ಹಲವು ಸಂಘಟನೆಗಳ ಆಹೋರಾತ್ರಿ ಧರಣಿ , ಹೋರಾಟದ ಪ್ರತಿಫಲ ಇದು, ಕಾಡಾನೆ ಹೋರಾಟಕ್ಕೆ ಕೇಸು ಹಾಕಿಸಿಕೊಂಡ ಹೋರಾಟಗಾರರು ಅದೆಷ್ಟೋ. ನಮ್ಮ ಮಾಜಿ ಶಾಸಕರಾದ ಹುರುಡಿ ವಿಷ್ವಣ್ಣ ರವರ ಮೇಲೆ ಕೂಡ ಇಲ್ಲಸಲ್ಲದ ಆರೋಪ ಹೊರಿಸಿ ಬಂದೂಕನ್ನು ವಶ ಪಡಿಸಿಕೊಂಡು ಇವರನ್ನು ಕುಗ್ಗಿಸುವ ಕುತಂತ್ರಗಳು ಈ ಹಿಂದೆ ನಡೆದಿದ್ದವು.ಹೋರಾಟಗಾರರ ತ್ಯಾಗ ಮತ್ತು ಹೋರಾಟಕ್ಕೆ ಸಿಕ್ಕ ಜಯ ಇದು. ಕಾಡಾನೆ ಹಾವಳಿಗೆ ಸಕಲೇಶಪುರದಲ್ಲಿ 77 ಮಂದಿ ಮೃತಪಟ್ಟಿದ್ದಾರೆ ಅವರ ಬಲಿದಾನದ ಸಂಕೇತವೇ ಇತ್ತೀಚಿನ ದಿನಗಳಲ್ಲಿ ಸಕಲೇಶಪುರದ ಸುತ್ತಮುತ್ತ ನೆಡೆಯುತ್ತಿರುವ ಕಾಡಾನೆ ಕಾರ್ಯಾಚರಣೆ. ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತವಾದ ಸಾಧನೆಯಲ್ಲ.ನೂತನವಾಗಿ ಆಯ್ಕೆಯಾಗಿರುವ ಮಾನ್ಯ ಶಾಸಕರು ಕಾಡಾನೆ ಹಿಡಿಯಲು ಒಂದು ಮನವಿ ಆದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿದ್ದಾರ? ಕಳುಹಿಸಿದ್ದರೆ ಅದರ ನಕಲು ಪ್ರತಿ ನೀಡಲಿ ಶಾಸಕರು ಒಬ್ಬರೇ ಮಾಡಿದ್ದಾರೆ ಎಂದು ನೀಡಿರುವ ಹೇಳಿಕೆ ಅಷ್ಟು ಸಮಂಜಸವಲ್ಲ ದಯವಿಟ್ಟು ನಿಮ್ಮ ಹೇಳಿಕೆಯಿಂದ ಹೋರಾಟಗಾರರಿಗೆ ಅವಮಾನ ಮಾಡುವ ಕಾರ್ಯ ಮಾಡಬೇಡಿ. ಇಂತಿ, ಸತೀಶ್ ಬೋಲ್ಟ್ತಾಲ್ಲೂಕು ಅಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ ಸಕಲೇಶಪುರ.