ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ದೂರಿನ ಹಿನ್ನಲೆ ಪ್ರೀತಂಗೌಡ್ರ ಆಪ್ತರ ಕ್ವಾಲಿಟಿ ಬಾರ್ ಶರತ್ ಒಡೆತನದ ಬಾರ್ ಹಾಗೂ ಕಿರಣ್ ಒಡೆತನದ ಹೋಟೆಲ್ ಮೇಲೆ ದಾಳಿ ನಡೆಸಿ ಯಾವ ಸಾಕ್ಷಿಗಳು ಸಿಗದ ಕಾರಣ ಎಸ್.ಐ.ಟಿ. ಅಧಿಕಾರಿಗಳು ವಾಪಸ್‌ಆಗಿದ್ದಾರೆ.
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ದಿನೆ ದಿನೆ ತಿರುವು ಪಡೆಯುತ್ತಿದ್ದು, ಪಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಆಪ್ತರಾಗಿದ್ದವರ ಮೂರು ಕಡೆ ಎಸ್.ಐ.ಟಿ. ತಂಡ ಮಂಗಳವಾರದಂದು ಸಂಜೆ ದಾಳಿ ನಡೆಸಿತ್ತು.
ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಕ್ವಾಲಿಟಿ ಬಾರ್ ಹಾಗೂ ಹೋಟೆಲ್ ಶ್ರೀಕೃಷ್ಣ ಮತ್ತು ಪುನಿತ್ ಮೇಲೆ ಎಸ್.ಐ.ಟಿ. ತಂಡವು ದಾಳಿ ನಡೆಸಿ ಕಂಪ್ಯೂಟರ್ ನಲ್ಲಿ ಸೇವ್ ಮಾಡಿರುವ ಡಿಸ್ಕ್ ನ್ನು ಪರಿಶೀಲಿಸಿದಾಗ ಯಾವ ಸಾಕ್ಷಿಯು ಸಿಗದೆ ವಾಪಸ್ ಆಗಿರುವುದಾಗಿ ತಿಳಿದು ಬಂದಿದೆ.
ಬಿಜೆಪಿ ಕಾರ್ಯಕರ್ತ ಗವಿರಂಗ ಮಾಧ್ಯಮದೊಂದಿಗೆ ಮಾತನಾಡಿ, ನೆನ್ನೆ ಮಾಜಿ ಶಾಸಕರಾದ ಪ್ರೀತಂಗೌಡರ ಆಪ್ತ ಬಳಗದ ಮನೆ, ಅಂಗಡಿ, ಕಛೇರಿ ಮೇಲೆ ಎಸ್.ಐ.ಟಿ ತಂಡ ದಾಳಿ ಮಾಡಲಾಗಿದ್ದು, ಇದೆಲ್ಲಾ ರಾಜಕೀಯ ಷಢ್ಯಂತರ ಎನ್ನಬಹುದು.
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಂತಹ ಕೆಲಸ ಯಾರು ಮಾಡಿರುವುದಿಲ್ಲ. ಪೊಲೀಸ್ ತನಿಖೆ ಪೂರ್ಣ ಮಾಡಿದರೂ ಯಾವುದೇ ದಾಖಲೆ ಸಿಕ್ಕಿರುವುದಿಲ್ಲ ಎನ್ನುವ ಅಭಿಪ್ರಾಯ ನನ್ನದು ಎಂದರು.
ರಾಜಕೀಯ ಹಿನ್ನಲೆಯಲಿ ಇಂತಹ ಕೆಲಸ ಯಾರು ಮಾಡಬಾರದು. ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.
ಕಾನೂನು ಬಗ್ಗೆ ನನಗೆ ಗೌರವ ಇರುವುದರಿಂದ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಸುಖ ಸುಮ್ಮನೆ ಪ್ರೀತಂಗೌಡರ ಆಪ್ತರ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.