
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕಲಿಕೆಯ ಅಂಗವಾಗಿ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೊಬಳಿ ಹಾರನಹಳ್ಳಿ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ’ವನ್ನು ಹಮ್ಮಿಕೊಂಡಿದ್ದರು.
ಇದರ ಅಂಗವಾಗಿ ‘ಆರೋಗ್ಯವೇ ಭಾಗ್ಯ’ ಎನ್ನುವ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ದೇಶದ ಬೆನ್ನೆಲುಬಾಗಿರುವ ರೈತರು ಪ್ರಮುಖವಾಗಿ ಆರೋಗ್ಯದೆಡೆಗೆ ಗಮನ ನೀಡಬೇಕು, ಅವರ ಕ್ಷೇಮಮೇ ನಮ್ಮೆಲ್ಲರ ಭಾಗ್ಯ ಎನ್ನುವ ಸ್ವಾರಸ್ಯದಲ್ಲಿ ಒಂದು ನಾಟಕವನ್ನು ಪ್ರದರ್ಶಿಸಿದರು.
ಸಮಯಕ್ಕೆ ಸರಿಯಾಗಿ ಲಸಿಕೆ ತೆಗೆದುಕೊಳ್ಳುವುದು ಎಷ್ಟು ಮುಖ್ಯ , ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಅವಶ್ಯ ಎಂದು ನಾಟಕದ ಮೂಲಕ ಬಿಂಬಿಸಿದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ವೇಣು. ಎಸ್. ಎ, ಅಂಗನವಾಡಿ ಶಿಕ್ಷಕಿಯಾದ ರಾಣಿ, ಆಶಾಕಾರ್ಯಕರ್ತೆಯಾದ ಕಲಾವತಿ ಹಾಗೂ ಗ್ರಾಮದ ರೈತರೆಲ್ಲರ ಉಸಸ್ಥಿತಿಯಲ್ಲಿ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಕೊನೆಗೊಂಡಿತು.
