ಸಕಲೇಶಪುರ : ಕಳೆದ ಹದಿನೈದು ದಿನಗಳಿಂದ ಹಾಸನದ ಸಕಲೇಶಪುರ ತಾಲ್ಲೂಕಿನ ರಕ್ಷದಿ ಗ್ರಾಮದಲ್ಲಿ ಪ್ರಾಕೃತಿಕ ರಂಗ ಶಿಬಿರ ನಡೆಯುತ್ತಿದೆ.

ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಈ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮಲೆನಾಡಿನ ಕಥೆಯನ್ನು ಆಧರಿಸಿ ಮಲೆಯಾದ್ರಿ ನಾಟಕ ಕಟ್ಟುತ್ತಿದ್ದಾರೆ ಜೊತೆಗೆ ಶಿಬಿರಾರ್ಥಿಗಳ ಬದುಕಿನ ಕಥೆಗಳನ್ನು ನಾಟಕದಲ್ಲಿ ನೋಡಬಹುದಾಗಿದೆ. ಕಳೆದ ಹದಿನೈದು ದಿನಗಳಿಂದಲು ಈ ಶಿಬಿರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ.

ಹಾಡು, ಕುಣಿತ, ಚಾರಣ, ಪರಿಸರ, ಸಾಹಿತ್ಯ, ಫೋಟೋಗ್ರಾಫಿ, ರಂಗಭೂಮಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಕೃತಿಯ ಮಧ್ಯೆ ಸುಂದರವಾದ ಶಿಬಿರ ಮೂಡಿ ಬರುತ್ತಲಿದೆ. ಶಿಬಿರವನ್ನು ಜೈ ಕರನಾಟಕ ಸಂಘ ಬೆಳ್ಳೆಕೆರೆ ತಂಡ ಆಯೋಜಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ನಡೆಯುತ್ತಿದೆ.

ಪ್ರಸಾದ್‌ ರಕ್ಷಿದಿರವರು ಶಿಬಿರದ ಸಂಚಾಲಕರಾಗಿದ್ದು, ನವೀನ್‌ ಸಾಣೇಹಳ್ಳಿ ನಾಟಕದ ನಿರ್ದೇಶನ ಮಾಡುತ್ತಲಿದ್ದಾರೆ.

ಈಗಾಗಲೆ ನಾಟಕ ಕೊನೆಯ ಹಂತದಲ್ಲಿದ್ದು ನಾಳೆ ೧೫ ರ ಬುದವಾರ ಸಂಜೆ ಏಳು ಘಂಟೆಗೆ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ ಮತ್ತು ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ಸಮಾರೋಪದಲ್ಲಿ ಖ್ಯಾತ ನ್ಯಾಯವಾದಿಗಳಾದ ಸುದೀರ್‌ ಕುಮಾರ್‌ ಮುರೋಳಿಯವರು ಭಾಗವಹಿಸುತ್ತಿದ್ದಾರೆ. ನಾಟಕ ಸಕಲೇಶಪುರದ ರಕ್ಷಿದಿ ಗ್ರಾಮ ಪೂರ್ಣಚಂದ್ರ ತೇಜಸ್ವಿ ರಂಗ ಮಂದಿದಲ್ಲಿ ನಡೆಯುತ್ತಿದ್ದು ಉಚಿತ ಪ್ರವೇಶವಿದ್ದು ತಾವೆಲ್ಲರು ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಗೊಳಿಸಬೇಕಾಗಿ ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ಅವರು ಕೇಳಿಕೊಂಡಿದ್ದಾರೆ

ಹೆಚ್ಚಿನ ಮಾಹಿತಿಗಾಗಿ – 9448825701

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *