*ಮಾನ್ಯರೇ*
ದಿನಾಂಕ 15.05.2024ನೇ ಬುಧವಾರದಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಮನವಿಯ ಮೇರೆಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಲಾಗಿತ್ತು.
ಸಭೆಯಲ್ಲಿ ಈ ಕೆಳಕಂಡ ವಿಚಾರಗಳನ್ನು ಚರ್ಚಿಸಲಾಯಿತು*
1. ಎಲ್ಲಾ ಕೃಷಿ ಪರಿಕರಗಳ ಟ್ರ್ಯಾಕ್ಟರ್, ಟಿಲ್ಲರ್, ಕೆರೆ ,ಮೋಟಾರ್, ಗೋದಾಮು, ಕಣ, ಇವೆಲ್ಲವುಗಳಿಗೆ ಶೇಕಡ 50 ರ ಸಹಾಯದನದಡಿಯಲ್ಲಿ ಅನುದಾನವನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾಗಿ ಕೇಳಿಕೊಳ್ಳಲಾಯಿತು .
2. ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಈಗಾಗಲೇ ಕಾಳುಮೆಣಸು ಇದ್ದು, ಅದೇ ರೀತಿ ಕಾಫಿ ಬೆಳೆಗೂ ಸಹ ಹವಾಮಾನಾಧಾರಿತ ಬೆಳೆ ವಿಮೆಯನ್ನು ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಲಾಯಿತು.
3. ಈಗಾಗಲೇ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಇದಕ್ಕಾಗಿ ಅರಣ್ಯ ಇಲಾಖೆಯ ಸಂಪರ್ಕ ಇಟ್ಟುಕೊಂಡು ಶೇಕಡ 90ರ ಸಹಾಯಧನದಡಿಯಲ್ಲಿ ಸೋಲಾರ್ ಬೇಲಿ ನಿರ್ಮಿಸಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಲಾಯಿತು.
4. ಕಾಫಿ ಬೆಳೆಯ ಖರ್ಚು ವೆಚ್ಚಗಳ (Cost of cultivation)ಬಗ್ಗೆ ಈ ಹಿಂದೆ ಇದ್ದಿದ್ದನ್ನು, ಇವತ್ತಿನ ನೈಜಸ್ಥಿತಿಗೆ ತಕ್ಕಂತೆ ಮಾರ್ಪಾಡು ಮಾಡಬೇಕೆಂದು ಮನವಿ ಮಾಡಲಾಯಿತು.
5. ಕಾರ್ಬನ್ ಕ್ರೆಡಿಟ್ ವಿಚಾರವಾಗಿ ಗಂಭೀರವಾಗಿ ಚರ್ಚಿಸಲಾಯಿತು. ಈಗಾಗಲೇ ಅರ್ಜಿ ಪಡೆದುಕೊಂಡ ಬಗ್ಗೆ ನೈಜ ಸ್ಥಿತಿ ಏನಾಗಿದೆ ಎಂಬುವುದರ ಬಗ್ಗೆ ಚರ್ಚಿಸಲಾಯಿತು.
6. ಹೊಸ ತಳಿಯ ಕಾಫಿಯನ್ನು ಇವತ್ತಿನ ವಯೋಮಾನಕ್ಕೆ ಹೊಂದುಕೊಳ್ಳುವಂತೆ ಪ್ರಯೋಗ ಮಾಡಿ ಬೆಳೆಗಾರರಿಗೆ ಪರಿಚಯಿಸಬೇಕೆಂದು ಮನವಿ ಮಾಡಲಾಯಿತು.
ಈ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಕೆಬಿ ಕೃಷ್ಣಪ್ಪ ,ಉಪಾಧ್ಯಕ್ಷರಾದ ಶ್ರೀ ಬಿ ಎಂ ನಾಗರಾಜು, ನಿರ್ದೇಶಕರುಗಳಾದ ಶ್ರೀ ಬಿಜಿ ಯತೀಶ್ ಹಾಗೂ ಶ್ರೀ ಕೆಹೆಚ್ ಬಸವರಾಜು ಇದ್ದರು *ಕರ್ನಾಟಕ ಬೆಳೆಗಾರರ ಒಕ್ಕೂಟ*