ಬೇಲೂರು : ಪಟ್ಟಣದ ಪೇಟೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಿ ಜಯಂತಿ ಅಂಗವಾಗಿ ಇಂದು ಮುಂಜಾನೆಯಿಂದಲೇ ಆರ್ಯವೈಶ್ಯ ಮಂಡಳಿ, ವಾಸವಿ ವನಿತಾ ಸಂಘ,ಹಾಗೂ ವಾಸವಿ ಯುವಜನ ವೇದಿಕೆ ವತಿಯಿಂದ ವಿಶೇಷವಾಗಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಶ್ರೀ ವಾಸವಿ ಜಯಂತಿಯ ಅಂಗವಾಗಿ ಪೇಟೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 3 ದಿನಗಳ ವಿಶೇಷ ಪೂಜೆಯನ್ನು ಲೋಕ ಕಲ್ಯಾಣಕ್ಕಾಗಿ ಭಕ್ತಿ ಪೂರ್ವಕವಾಗಿ ನೆರವೇರಿಸಲಾಗುತ್ತದೆ ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಗೋವಿಂದರಾಜ್ ತಿಳಿಸಿ ಮಾತನಾಡಿದ ಅವರು

ಕುಲದೇವತೆಯ ಶ್ರೀ ವಾಸವಿ ಜಯಂತಿಯ ಹಬ್ಬವನ್ನು ಸಮಸ್ತ ಕುಲಬಾಂಧವರೆಲ್ಲ ಸೇರಿ ಹಲವು ವರ್ಷಗಳಿಂದ ವಿಶೇಷವಾಗಿ ಅಮ್ಮನವರ ಪೂಜಾ ಕೈಂಕರ್ಯಗಳನ್ನು ಭಕ್ತಿ ಪೂರಕವಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.

ಅದೆ ರೀತಿ ಲೋಕಕಲ್ಯಾಣಕ್ಕಾಗಿ ಹಾಗೂ ಕನ್ನಿಕಾ ಪರಮೇಶ್ವರಿ ದೇವಿ ಅವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ ಇದರಿಂದ ದೇಶಾದ್ಯಂತ ಉತ್ತಮ ಕಾರ್ಯ ಸಿದ್ದಿ, ಮಳೆ ಬೆಳೆ ಆಗುವ ಮೂಲಕ ಎಲ್ಲಾ ಜನಾಂಗದ ಬದುಕು ಹಸನಾಗಲಿ ಎಂದು ಹಾರೈಸಿದರು.

ಬಳಿಕ ವಾಸವಿ ವನಿತಾ ಸಂಘದ ಅಧ್ಯಕ್ಷೆ ಪ್ರತಿಮಾ ರಘು ನಂದನ್ ಮಾತನಾಡಿ ಶ್ರೀ ವಾಸವಿ ಜಯಂತಿ ಹಬ್ಬದ ಪ್ರಯುಕ್ತ ಹಲವಾರು ವರ್ಷಗಳಿಂದ ಪೇಟೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಳಿಯ ಎಲ್ಲಾ ಕುಟುಂಬದವರು ಸೇರಿ ಜಗತ್ತಿನ ಕಲ್ಯಾಣಕ್ಕಾಗಿ ಮತ್ತು ಜನಾಂಗದ ಉದ್ಧಾರಕ್ಕಾಗಿ 3 ದಿನಗಳ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ಅದರಂತೆ ಇಂದು ಮುಂಜಾನೆಯಿಂದಲೇ ಮಡಿ ಪೂಜೆ, ಗೋಪೂಜೆ, ವಾಸವಿ ರಥ, ಪುಷ್ಪಾಲಂಕಾರ, ಹೋಮ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆ

ಇದರಿಂದ ನಾಡಿನ ಎಲ್ಲಾ ಜನಾಂಗಕ್ಕೂ ತಾಯಿ ಕನ್ನಿಕಾ ಪರಮೇಶ್ವರಿ ಅವರ ಆಶೀರ್ವಾದ ಪಲಿಸಿ ಉತ್ತಮ ಸಂದೇಶ ರವಾನೆಯಾಗಲಿ ಎಂದರು.

ನಂತರ ಮಾತನಾಡಿದ ಕೋಟೆ ವಾಸಿವಿ ದೇವಾಲಯದ ಪ್ರಧಾನ ಅರ್ಚಕ ಪ್ರಶಾಂತ್ ಮಾತನಾಡಿ ಪ್ರತಿ ವರ್ಷವದಂತೆ ಈ ವರ್ಷವೂ ಸಹ ವಾಸವಿ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುವುದು ಇಂದು ವಾಸವಿ ತಾಯಿಗೆ ಶ್ರೀ ಚನ್ನಕೇಶವ ದೇವಸ್ಥಾನ ಗಂಗೆಯನ್ನು ತರುವ ಮೂಲಕ ಮಡಿ ಉತ್ಸವವನ್ನು ತಂದು ತಾಯಿಗೆ ವಿಶೇಷ ಅಭಿಷೇಕವನ್ನು ಮಾಡಿದ ನಂತರ ವಿಶೇಷ ಪೂಜೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು

ಈ ಸಂದರ್ಭ ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಬಿ ಎಂ ಸುರೇಶ್. ಕಾರ್ಯದರ್ಶಿ ಮಂಜುನಾಥ್. ವಾಸವಿ ವನಿತಾ ಸಂಘದ ಉಪಾಧ್ಯಕ್ಷ ಲಕ್ಷ್ಮಿ ನಾಗೇಶ್. ಕಾರ್ಯದರ್ಶಿ ರೇಖಾ ಗಿರೀಶ್. ವಾಸವಿ ಯುವಜನ ಸಂಘದ ಅಧ್ಯಕ್ಷ ಸುಧೀಂದ್ರ ಸೇರಿದಂತೆ ಆರ್ಯವೈಶ್ಯ ಮಂಡಳಿಯ ನಿರ್ದೇಶಕರಾದ ವಿಶ್ವನಾಥ್. ಕೃಷ್ಣಕುಮಾರ್. ಕೃಷ್ಣಮೂರ್ತಿ. ಅಶೋಕ್. ಕೋಟೆ ವಾಸವಿ ಸಂಘದ ಸರ್ವ ಸದಸ್ಯರು ಹಾಜರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *