ಸಕಲೇಶಪುರ : ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ವಾರ್ಷಿಕ ವಿಪತ್ತು ನಿರ್ವಹಣಾ ಅಣಕು ಕವಾಯತು ಕಾರ್ಯಕ್ರಮವನ್ನು ಇಂದು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರೈಲು ದುರಂತ ಸಂಭವಿಸಿದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಹಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ

ಹಾಗೂ ರೈಲ್ವೆಯ ಸನ್ನದ್ಧತೆ, ತಯಾರಿಯನ್ನು ಖಾತ್ರಿತಪಡಿಸಿಕೊಳ್ಳಲು ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ರೈಲು ಅಪಘಾತದ ಘಟನೆ ಮತ್ತು ನಂತರದ ಪರಿಹಾರ ಕಾರ್ಯಾಚರಣೆಗಳನ್ನು ಅನುಕರಿಸುವ ಅಣಕು ಕವಾಯತು ವಿಪತ್ತು ನಿರ್ವಹಣೆ , ಪ್ರಮುಖ ರೈಲು ಅಪಘಾತ ಮತ್ತು ಪರಿಹಾರ ಕಾರ್ಯಾಚರಣೆ

ಈ ಅಣಕು ಕವಾಯತು ವಿವಿಧ ರೈಲ್ವೆ ಇಲಾಖೆಗಳು ಮತ್ತು ಇತರೆ ತುರ್ತು ಸೇವೆಗಳ ಸಿಬ್ಬಂದಿಯನ್ನು ತುರ್ತು ಸಂದರ್ಭಗಳಲ್ಲಿ ಅಭ್ಯಾಸ ಮಾಡಲು ಮತ್ತು ಅವರ ಪ್ರತಿಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ

ಸಮರ್ಥವಾದ ವಿಪತ್ತು ನಿರ್ವಹಣೆ ಮೂಲಕ ಮಾನವ ಜೀವ ಮತ್ತು ಆಸ್ತಿಯ ಸಂಭಾವ್ಯ ನಷ್ಟವನ್ನು ಕಡಿಮೆ ಮಾಡುವುದು ಈ ಕವಾಯತಿನ ಗುರಿಯಾಗಿದೆ ಎಂದು ಮೈಸೂರು ನೈರುತ್ಯ ವಿಭಾಗೀಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed