ಹಾಸನ: ಹಳ್ಳಿಗಳಲ್ಲಿ ಜಾತಿ ಎನ್ನುವ ಶನಿ ಮತ್ತು ಪಾಳೇಗಾರಿಕೆ ಬಿಟ್ಟರೇ ಮೌಲ್ಯಗಳಿಗೆ ಯಾವ ಕೊರತೆ ಇಲ್ಲ. ರಾಜಕೀಯ ಬದಲಾವಣೆ ಕೂಡ ಆಗಬೇಕಾದರೇ ಅದು ಗ್ರಾಮೀಣ ಜನರಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರೋ. ಹಿ.ಶಿ. ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಜಿಲ್ಲಾ ಘಟಕದಿಂದ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಜಾನಪದ ಗೀತಗಾಯನ ಮತ್ತು ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಹಿಂದಿನ ಗ್ರಾಮೀಣ ಕಲೆಯಾದ ತಂಬೂರಿ ನುಡಿಸಿ, ಡೋಲು ಭಾರಿಸುವ ಮೂಲಕ ವಿಭೀನ್ನವಾಗಿ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು, ಯಾರು ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ ಆ ಮಾರ್ಕೇಟ್ ವ್ಯಾಪಾರದ ವಸ್ತುಗಳು ನಾವು ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಮರೆತರೇ ನಾವು ಮುಂದೆ ಕಳೆದು ಹೋಗುತ್ತೇವೆ.
ಕಾಲ ಕಾಲಕ್ಕೆ ನಾವುಗಳು ಬದಲಾವಣೆ ಮಾಡಿಕೊಂಡು ಸಾಗಬೇಕು. ಪ್ರಸ್ತುದಲ್ಲಿ ಜನಪದ ಶೈಲಿಯಲ್ಲಿ ನಾವು ಹೋಗಬೇಕಾಗಿದೆ. ಮತ್ತೊಬ್ಬರಿಗೆ ಮಾರ್ಕೇಟ್ ಆಗದೇ ನಾವೇ ಗೂಡ್ಸ್ ವಸ್ತುಗಳಾಗಬೇಕು.
ಹಳ್ಳಿ ಕಡೆಯ ಜಾನಪದ ಕೊಂಡೂಯ್ಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮಾರುಕಟ್ಟೆ ಎಂದರೇ ಕೊಳ್ಳೊದು ಕೊಳ್ಳುವುದು ಇರುತ್ತದೆ. ನೈತಿಕತೆ ಎನ್ನುವುದು ಹೊರಟು ಹೋಗುತ್ತದೆ. ಯಾರು ಮಾರುತ್ತಾರೆ, ಯಾರು ಕೊಂಡುಕೊಳ್ಳುತ್ತಾರೆ ಎಂಬುದನ್ನು ಹೇಳುವುದಕ್ಕಾಗಲ್ಲ. ಅನೇಕ ಶ್ರೀಮಂತರು ಕೊಂಡುಕೊಳ್ಳುತ್ತಿದ್ದಾರೆ.
ಇಂದು ಬೆಂಗಳೂರೇ ಒಂದು ಗ್ಯಾರೇಜ್ ಆಗುತ್ತಿದೆ.ಈ ಸಂದರ್ಭದಲ್ಲಿ ನಾವು ಹಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ಯಾವ ಮೌಲ್ಯ ಇರುವುದಿಲ್ಲ. ಬರೀ ಸುಳ್ಳು, ದರೋಡೆ, ವಂಚನೆ ಇವೆ ಪ್ರಧಾನ ಆಗಿರುತ್ತದೆ ಎಂದರು.
ಈ ವೇಳೆ ಹಳ್ಳಿಹಳ್ಳಿಗಳಲ್ಲಿ ಜಾನಪದ ಬೆಳೆಸುವ ನಿಟ್ಟಿನಲ್ಲಿ ಜನಪದ ಪರಿಷತ್ತು ಮುಂದಾಗಬೇಕಾದ ಸಂದರ್ಭ ಇದೆ ಎಂದು ಕಿವಿಮಾತು ಹೇಳಿದರು.
ಇಂದು ಕುಳಿತುಕೊಂಡು ಯೋಚಿಸುವ ಪರಿಸ್ಥಿತಿಯಿಲ್ಲ. ತಲೆಗಳಿಗೆ ವಿಷಯಗಳು ಬೇಕಾಗಿಲ್ಲ. ವಸ್ತುಗಳ ಅವಶ್ಯಕತೆ ಇದೆ. ಪ್ರಚಾರ ಏನು ಮಾಡುತ್ತಿದೆ ಅದನ್ನು ಕೇಳುತಿದ್ದೇವೆ ಹೊರತು ಸ್ವಂತಿಕೆ ಕಡೆ ಯೋಚನೆ ಮಾಡಲಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಸ್ವಂತದ ಕಡೆ ಹೋಗಬೇಕಾದರೇ ನಾವು ಜನಪದ ಕಡೆ ಹೋಗಬೇಕಾಗಿದೆ. ಹಳ್ಳಿಗಳಲ್ಲಿ ನಾನಾ ಬದಲಾವಣೆಗಳಾಗಿದೆ. ಜಾತಿ ಎನ್ನುವ ಶನಿ ಹಾಗೂ ಪಾಳೇಗಾರಿಕೆ ಬಿಟ್ಟರೇ ಹಳ್ಳಿಗಳಲ್ಲಿ ಮೌಲ್ಯಗಳು ಇದ್ದವು. ದೂರ ಇದ್ದವರು ಹತ್ತಿರ ಆಗುವರು, ಹತ್ತಿರ ಇದ್ದವರು ದೂರ ಆಗುತ್ತಿದ್ದ ಮೌಲ್ಯಗಳ ಕಾಣಬಹುದಿತ್ತು. ಶಾಂತಿ ಮತ್ತು ನೆಮ್ಮದಿ ಎನ್ನುವುದು ಇತ್ತು. ಬದುಕಿಗೆ ಒಂದು ಗಟ್ಟಿತನ ಎಂಬುದು ಇತ್ತು. ಅಲ್ಲಿ ಯಾರು ಮಾರ್ಕೇಟ್ ಆಗಿರಲಿಲ್ಲ. ಮೌಲ್ಯ, ನೆಮ್ಮದಿ ಉಳಿಯಬೇಕು ಎಂದರೇ ನಾವು ಗ್ರಾಮಗಳ ಕಡೆ ಪ್ರಯಾಣ ಬೆಳೆಸಿ ಗ್ರಾಮಗಳನ್ನು ಪುನರ್ ಜೀವ ಕೊಡಬೇಕಾಗಿದೆ ಎಂದು ಸಲಹೆ ನೀಡಿದರು.
ಬೆಂಗಳೂರಲ್ಲಿ ಏನು ಬದಲಾವಣೆ ಮಾಡಿದರೂ ಶೇಕಡ ೩೫ ಪರ್ಸೇಂಟ್ ಗಿಂತ ಹೆಚ್ಚು ಓಟ್ ಹಾಕುವುದಿಲ್ಲ. ರಾಜಕಾರಣಿಗೆಳಿಗೆ ಓಟ್ ಹಾಕಿದ ಕೂಡಲೇ ಕೆಲಸ ಮಾಡಿಕೊಡುವರೇ! ಕೆಲಸ ಮಾಡಿಕೊಡಬೇಕಾದರೇ ಲಂಚ ಕೊಡಬೇಕು ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು.
ಆದರೇ ಹಳ್ಳಿಗಳಲ್ಲಿ ಓಟ್ ಹಾಕಿ ಏನಾದರೂ ನಮ್ಮ ಗ್ರಾಮ ಅಭಿವೃದ್ಧಿ ಮಾಡುವರೇ ವಿಶ್ವಾದಲ್ಲಿ ಹೆಚ್ಚು ಜನರು ಮತ ಹಾಕಲು ಮುಂದಾಗುತ್ತಾರೆ. ರಾಜಕೀಯ ಬದಲಾವಣೆ ಏನಾದರೂ ಆಗಬೇಕಾದರೇ ಅದು ಹಳ್ಳಿಗಳಿಂದ ಮಾತ್ರ ಸಾಧ್ಯ. ಜಾನಪದ ಗೀತೆ ಎನ್ನುವುದು ಯಾವಾಗಲು ಜನರನ್ನು ಮುಂದೆ ಇಟ್ಟುಕೊಳ್ಳುವಂತದಾಗಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅದ್ಭುತವಾದ ಜಾನಪದ ಕಲಾವಿದರು ಈ ಹಾಸನ ಜಿಲ್ಲೆಯಲ್ಲಿ ಇದ್ದಾರೆ. ಈ ಜಿಲ್ಲೆ ತಂಬೂರಿಗೆ ಹೆಸರುವಾಸಿಯಾದಂತಹ ಕಲೆ ಹೊಂದಿದೆ. ನಾಗೇಗೌಡರಿಗೆ ಅತ್ಯಂತ ಪ್ರೀತಿ ಪಾತ್ರರಾದಂತಹ ತಂಬೂರಿ ದಾಸಪ್ಪ. ಅವರು. ಹಾಡುತ್ತಿದ್ದ ಅಷ್ಟು ಹಾಡನ್ನು ನಾಗೇಗೌಡರು ಸಂಗ್ರಹಿಸಿದ್ದರು. ಹಲವಾರು ಜಾನಪದ ಕಲೆ ಇಲ್ಲಿವೆ. ಬಯಲಾಟ ಇತ್ತು ಈಗ ಸಂಪೂರ್ಣವಾಗಿ ನಶೀಸಿ ಹೋಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ಜಾನಪದ ಗೀತಾ ಪ್ರಸಾರಕ್ಕೆ ಹಾಸನದಿಂದ ಅಪಾರ ಕೊಡುಗೆ ಇದೆ. ಅನೇಕರು ಜನಪದ ಸಂಗ್ರಹ ಕಲೆಯಲ್ಲಿ ಸಾಕಷ್ಟು ವಿದ್ವಾಂಸರು ಕೆಲಸ ಮಾಡಿದ್ದಾರೆ. ಸ್ವಾತಂತ್ರ ಹೋರದ ವೇಳೆ ಜನಪದ ಕೇಳುತಿತ್ತು. ಜಾನಪದ ಗೀತೆಗಳ ಪ್ರಚಾರಕ ಎಂದರೇ ಎಸ್.ಕೆ. ಕರೀಂಖಾನ್. ಜಾನಪದ ಕಲಾವಿದರಿಗೆ ಸಲ್ಲಿಸುವ ಗೌರವ ಈ ಕಾರ್ಯಕ್ರಮವಾಗಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಪ್ರೋ. ಹಿ.ಶಿ. ರಾಮಚಂದ್ರೇಗೌಡ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಡಾ. ಚಂದ್ರು ಕಾಳೇನಹಳ್ಳಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ದೇವಾನಂದವರಪ್ರಸಾದ್ ಇವರನ್ನು ಸನ್ಮಾನಿಸಿ ಗೌರವಿಸಿದರು.
ನಂತರ ಜಾನಪದ ಗೀತಗಾಯನ ಹಾಗೂ ಸಂಗೀತ ಸಂಭ್ರಮದಲ್ಲಿ ಹಿರಿಯ ಕಲಾವಿದರು ಹಿಂದಿನ ಗ್ರಾಮೀಣ ಕಲೆಯನ್ನು ಮತ್ತೆ ಮರುಕಳಿಸಿ ನೋಡುಗರ ಗಮನಸೆಳೆದರು.
ಇದೆ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕಾರ್ಯಾಧ್ಯಕ್ಷರಾದ ಬೆಂಗಳೂರಿನ ಪ್ರೋ. ಹಿ.ಚಿ. ಬೋರಲಿಂಗಯ್ಯ, ಸಾಹಿತಿ ಮೇಟಿಕೆರೆ ಹಿರಿಯಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹೆಚ್.ಎಲ್. ಮಲ್ಲೇಶ್ ಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಾನಪದ ಪರಿಷತ್ತು ಕಾರ್ಯದರ್ಶಿ ಬಿ.ಟಿ. ಮಾನವ, ಜಿ.ಓ. ಮಹಾಂತಪ್ಪ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶೋಭ ಪ್ರಾರ್ಥಿಸಿದರು.