ಸಕಲೇಶಪುರ : ಲಯನ್ಸ್ ಕ್ಲಬ್ ಹಾಗೂ ಕಂಪಾನಿಯೋ ಇವರ ಸಹಯೋಗದಲ್ಲಿ ಜುಲೈ 18 ರಿಂದ 31 ರವರೆಗೆ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಪಟ್ಟಣದ ಲಯನ್ಸ್ ಸೇವಾಮಂದಿರದಲ್ಲಿ ನಡೆಯುತ್ತಿದ್ದು ಇದರ ಸದುಪಯೋಗವನ್ನು ಸಕಲೇಶಪುರ ನಾಗರೀಕರು ಪಡೆದು ಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಅದ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಮನವಿ ಮಾಡಿದ್ದಾರೆ.

ಪ್ರತಿದಿನ 150 ಕ್ಕೂ ಹೆಚ್ಚು ಜನರು ಇದರ ಉಪಯೋಗ ಪಡೆಯುತ್ತಿದ್ದು ಮಧುಮೇಹ( ಶುಗರ್) ಅಧಿಕ ರಕ್ತದೊತ್ತಡ, ( ಬಿ.ಪಿ.) ಸಂದಿವಾತ ,ವೆರಿಕೋಸ್ ವೇನ್, ಸ್ನಾಯು ಸೆಳೆತ ,ಊತ, ಸಯಾಟಿಕಾ, ಸರ್ವಿಕಲ್, ಸ್ಟ್ಯಾಂಡಿಲೈಟಿಸ್, ಬೊಜ್ಜು ನಿವಾರಣೆ, ಪಾರ್ಕಿನ್ ಸನ್, ನಿದ್ರಾಹೀನತೆ, ಪಾರ್ಶ್ವವಾಯು, ಬೆನ್ನುನೋವು, ಮಂಡಿನೋವು, ಥೈರಾಯಿಡ್, ಹಾಗೂ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸಮಸ್ಯೆಗಳು ಇದ್ದಲ್ಲಿ ಈ ಫೂಟ್ ಥೆರಪಿಯಿಂದ ಶಮನವಾಗಲಿದ್ದು ಈ ಉಚಿತ ಸೇವೆಯನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *