
ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಕರಡಿಗಾಲ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಅವರ ವರ್ಷಕ್ಕೊಮ್ಮೆ ಚೈತ್ರ ಮಾಸ ಶುಕ್ಲ ಪಕ್ಷದಲ್ಲಿ ನಡೆಯುವ ಅದ್ದೂರಿ ಸುಗ್ಗಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸುಗ್ಗಿ ಉತ್ಸವಕ್ಕೆ ಪೂರ್ವ ತಯಾರಿಯಂತೆ ಇಂದು ಬೆಳಿಗ್ಗೆ 8ಗಂಟೆಗೆ ಸರಿಯಾಗಿ ಶ್ರೀ ದೇವಿರಮ್ಮ ಸುಗ್ಗಿ ಉತ್ಸವದ ಸುಗ್ಗಿ ಸಾರನ್ನು ನಡೆಸಲಾಯಿತು.
ಈ ನಿಯಮದಂತೆ ಗ್ರಾಮಸ್ಥರು ದೇವರ ಕಟ್ಟು ನಿಟ್ಟಿನ ನಿಯಮಗಳಾದ” ಹಸಿ ಕಡಿಯುವಹಾಗಿಲ್ಲ, ಒಣಗು ಮುರಿಯುವ ಹಾಗಿಲ್ಲ.” ಎಂಬುವುದರ ಜೊತೆಗೆ ಮಾಂಸಹಾರವಿಲ್ಲದ ಮತ್ತು ಒಗ್ಗರಣೆ ಇಲ್ಲದ ಅಡುಗೆಯನ್ನು ಸೇವಿಸುದರೊಂದಿಗೆ ಮಡಿಯಿಂದ ಇರುವುದರಿಂದಾಗಿ ದೇವರ ಕಾರ್ಯದಲ್ಲಿ ಗ್ರಾಮಸ್ಥರೆಲ್ಲ ಪಾಲ್ಗೊಳ್ಳುತ್ತಾರೆ. ಇದರ ಪ್ರಯುಕ್ತ ಇಂದು ಸಂಜೆ ಹೊನ್ನಾರು, ಮಲ್ಲು ಸುಗ್ಗಿ ನಡೆಯುತ್ತದೆ. ನಾಳೆ ಬುಧವಾರದಂದು ದೊಡ್ಡ ಸುಗ್ಗಿ ನಡೆಯುತ್ತದೆ.
ಗುರುವಾರ ಕೆಂಡೋತ್ಸವ, ಬಿಲ್ಲು ಸುಗ್ಗಿ ಹಾಗೂ ಮಡೆ ಹಾಗೂ ಹಗಲು ಸುಗ್ಗಿ,ದೇವರಿಗೆ ಹಣ್ಣು ಕಾಯಿ, ಮಡಿಲಕ್ಕಿ ಸಮರ್ಪಣೆ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಇರುತ್ತದೆ. ನಂತರ ಮದ್ಯಾಹ್ನ ಹಗಲು ಸುಗ್ಗಿ ಹಾಗೂ ಸಂಜೆ ಮಡೆ ಉತ್ಸವ ಮಾಡುವುದರೊಂದಿಗೆ ಸುಗ್ಗಿಗೆ ತೆರೆ ಬೀಳಲಿದೆ.
ಉತ್ಸವದ ತಯಾರಿ ಬಿರುಸಿನಿಂದ ನಡೆಯುತ್ತಿದೆ. ಊರಿನ ದೇವಸ್ಥಾನ ಹಾಗೂ ಸುಗ್ಗಿ ಕಟ್ಟೆ ಕೆಸರಿಮಯವಾಗಿ ಕಂಗೊಳಿಸುತ್ತಿದೆ. ಜೊತೆಗೆ ಬಣ್ಣ ಬಣ್ದ ದ ಲೈಟಿಂಗ್ಸ್ ಕಣ್ಮನ ಸೆಳೆಯುತ್ತಿದೆ.
ಒಟ್ಟಾರೆ ಈ ಬರಿ ಕರಡಿಗಾಲದ ಇತಿಹಾಸ ಪ್ರಸಿದ್ಧವಾದ ಶ್ರೀ ದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಸುಗ್ಗಿ ಉತ್ಸವಕ್ಕೆ ಕ್ಷಣಗಣನೆbಶುರುವಾಗಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ಮುಖಾಂತರ ದೇವಿಯ ದರ್ಶನ ಪಡೆದು ಪುನೀತರಾಗಬೇಕೆಂದು ಊರಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.
