ಸಕಲೇಶಪುರ : ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ KA- 01 MA -1619 ನಂಬರಿನ ಮಾರುತಿ 800 ಕಾರು ಹಾಗೂ KA-46 -L 6172 ನಂಬರಿನ ಹೀರೋ ಸ್ಪ್ಲೆಂಡರ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನ ಎಡಗಾಲಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಸಾಕಷ್ಟು ರಕ್ತಸ್ರಾವ ಉಂಟಾಗಿರುತ್ತದೆ.

ಕೂಡಲೇ ಸ್ಥಳೀಯರ ಸಹಕಾರದಿಂದ ಆಂಬುಲೆನ್ಸ್ ಮುಖಾಂತರ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅರೆಕೆರೆ, ಜಾನೆಕೆರೆ ,ಸತ್ತಿಗಲ್, ಮಾರ್ಗವಾಗಿ ಬರುವಾ ವಾಹನ ಗಳಿಕೆ ಸೂಕ್ತವಾದ ಸಿಗ್ನಲ್ ಆಗಲಿ ಹಂಪಾಗಲಿ ಇಲ್ಲದೆ ರಾಷ್ಟ್ರೀಯ ಹೆದ್ದರಿ75 ಕ್ಕೇ ವಾಹನಗಳು ಎಂಟ್ರಿಕೊಟ್ಟ ಕೂಡಲೇ ಪ್ರತಿದಿನ ಒಂದಲ್ಲ ಒಂದು ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆನರಾ ಬ್ಯಾಂಕ್ ಸರ್ಕಲ್ ಹತ್ತಿರ ಹಾಗೂ ಜಾನೆಕೆರೆ ಮಾರ್ಗದ ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಸಂಪೂರ್ಣ, ಸುರಕ್ಷಿತವಾಗಿ ವಾಹನಗಳು ಚಲಿಸಲು ಅನುವು ಮಾಡಿ ಕೊಟ್ಟಿರುವುದಿಲ್ಲ ಹಾಗೂ ಇಲ್ಲಿ ಸರಿಯಾದ ರೀತಿಯಲ್ಲಿ ಹಂಪ್ಸ್ ಆಗಲಿ ಹಾಗೂ ಸಿಗ್ನಲ್ ಆಗಲಿ ಅಳವಡಿಸದೆ ವೃತ್ತವನ್ನು ಆಗಲೀ ಕಾರಣ ಮಾಡದೆ ಅವೈಜ್ಞಾನಿಕ ಕಾಮಗಾರಿಯಿಂದ ಮಾಡಿರುವ ಕಾರಣ ಈ ಒಂದು ದುರಂತಕ್ಕೆ ಕಾರಣವಾಗಿದೆ.

ಈ ವೃತ್ತದಲ್ಲಿ ವಾಣಿಜ್ಯ ಮಳಿಗೆಗಳು ಇದ್ದು, ಸಾರ್ವಜನಿಕರು ಈಚೆ ಬದಿಯಿಂದ ಆಚೆ ಬದಿಗೆ ಸಾರ್ವಜನಿಕರು ಭಯವಿತರಾಗಿ, ಓಡಾಡುವ ಪರಿಸ್ಥಿತಿ ಕೂಡ ಎದುರಾಗಿದೆ, ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *