
ಉಚಿತ ರಕ್ತ ನಿಡುವ ಮೂಲಕ ಸಹಾಯ ಮಾಡುವ ಗುಣ ಇರಬೇಕು : ಅರ್. ಟಿ.ದ್ಯಾವೇಗೌಡರು
ಹಾಸನ : ರಕ್ತ ದಾನ ಶ್ರೇಷ್ಠ ದಾನವಾಗಿದ್ದು ಉಚಿತ ರಕ್ತ ದಾನ ಮಾಡುವುದು ನಮ್ಮೇಲ್ಲರ ಕರ್ತವ್ಯ ವಾಗಿದೆ. ರಕ್ತ ದಾನ ಮಾಡುವ ಗುಣ ನಮ್ಮಲ್ಲಿ ಇರಬೇಕು, ಎಂದು ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರ್ ಟಿ ದ್ಯಾವೇಗೌಡರು ದಿನಾಂಕ 8-4-2025 ರಂದು ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಬ್ಲೆಡ್ ಕ್ಯಾಂಪ್ ಮತ್ತು ಹಾಸನ ರೆಡ್ ಕ್ರಾಸ್ ಸಂಸ್ಥೇಯ ವತಿಯಿಂದ ಮಲೆನಾಡ ಇಂಜಿನಿಯರಿಂಗ್ ಕಾಲೆಜಿನ ಅಲ್ಯುಮಿನಿ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಉಚಿತ ರಕ್ತ ದಾನ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ನಾವು ನಿಡುವ ರಕ್ತ ಇನ್ನೋಬ್ಬರ ಪ್ರಾಣ ಉಳಿಸಲು ಸಹಾಕಾರಿಯಾಗುತ್ತದೆ, ಇಂಥ ಮಹಾಕಾರ್ಯ ಶ್ರೇಷ್ಠ ವಾದುದು ಎಂದರು.
ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿದ ಹಾಸನ ರೇಡ್ ಕ್ರಾಸ್ ಸಂಸ್ಥೆ ಯ ಜಿಲ್ಲಾ ಅಧ್ಯಕ್ಷರಾದ ಹೆಮ್ಮೀಗೆ ಮೋಹನ್ ನೆರವೇರಿಸಿ ಮಾತಾನಾಡಿದ ಅವರು ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗಳು ಪ್ರತಿ ವರ್ಷವು ಹೆಚ್ಚಿನ ರೀತಿಯಲ್ಲಿ ಉಚಿತ ರಕ್ತದಾನ ಮಾಡುತ್ತಿದ್ದಾರೆ, ಬಹಳ ಸಂತೋಷ ವಾಗಿದೆ, ಸೇವಾ ಮನೋಭಾವನೆ ಇಂದ ಇಂಥ ಉಚಿತ ರಕ್ತ ದಾನ ಶಿಭಿರದಿಂದ ಬಡ ರೋಗಿ ಗಳಿಗೆ, ಹಾಗೂ ಎಲ್ಲರ ಪ್ರಾಣ ಉಳಿಸುತ್ತಿರವ ಕೆಲಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರೀಕ ಶಿಕ್ಷಣ ಸಂಸ್ಥೆ ಯ ಖಜಾಂಚಿ ಪಾರ್ಶನಾಥ್, ರೇಡ್ ಕ್ರಾಸ್ ಸಂಸ್ಥೇಯ ಕಾರ್ಯದರ್ಶಿ ಷಬ್ಬಿರ್.ಖಜಾಂಚಿ ಜಲಂದರ್, ವ್ಯೆ ಎನ್ ಸುಬ್ಬ ಸ್ವಾಮಿ, ಅಮಜದ್ಖಾನ್, ಜಯಪ್ರಕಾಶ್,ಮಲೆನಾಡ ಕಾಲೆಜೀನ ಎಲೆಕ್ಟ್ರಾನಿಸ್ ವಿಭಾಗದ ಮುಖ್ಯ ಸ್ಥರಾದ ಡಾ ಪಿ ಸಿ ಶ್ರೀಕಾಂತ್, ಪ್ರಾಧ್ಯಪಕರಾದ ಇಂದ್ರಬಹುದ್ದೂರು. ವೇಂಕಟೇಶ್ ಕೋಲ್ಲಿ. ಡಾ ಸುಷ್ಮಾ, ಡಾ ಡಿ. ಎಸ್. ಕೀರ್ತಿ, ಡಾ ನಾಗಲಕ್ಷ್ಮೀ ಮತ್ತೀತರರು ಉಪಸ್ಥಿತರಿದ್ದರು.

