
ಅರಸೀಕೆರೆ : ತಾಲೂಕಿನ ಕಣಕಟ್ಟೆ ಹೋಬಳಿ ಹೊಳಲ್ಕೆರೆ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ರಾಮನವಮಿ ಪುಷ್ಯ ನಕ್ಷತ್ರ ಅಭಿಜನ್ ಮುಹೂರ್ತದಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜ್ಯಂಬಣೆಯಿಂದ ನಡೆಯಿತು.
ರಾಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ ದೇವಾಲಯ ಮುಂಭಾಗ ಹಾಗೂ ರಥ ಬೀದಿ ತೊಳಿರು ತೋರಣ ಬಾಳೆಕಂದುಗಳಿಂದ ಶೃಂಗರಿಸಿದ್ದರೆ ಇಲ್ಲ ದೇವಾಲಯ ಮುಂಭಾಗ ಮತ್ತು ರಥ ಬೀದಿ ಬಣ್ಣ ಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಭಕ್ತರ ಕಣ್ಮನ ಸೆಳೆಯುತಿದ್ದು ಜಾತ್ರೆಗೆ ಮೆರಗು ನೀಡಿದೆ ರಥ ಬೀದಿಯಲ್ಲಿ ರಥವನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಹಾಗೂ ಬಾವುಟಗಳು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು
ಇತ್ತ ರಾಮೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಲ ಕರಡೇವು ವಾದ್ಯದೊಂದಿಗೆ ದೇವಾಲಯದಿಂದ ಗ್ರಾಮಕ್ಕೆ ಉತ್ಸವದಲ್ಲಿ ಪೇ ಗ್ರಾಮ ದೇವತೆ ಮುಕ್ಕಣ್ಣೇಶ್ವರಿ ದೇವಿ ಸಮ್ಮುಖದಲ್ಲಿ ತೆರಳಿತೆರಳಿ ಮೆರವಣಿಗೆ ನಡೆಸಲಾಯಿತು
ನಂತರ ಅಲಂಕಾರಗೊಂಡಿದ್ದ ರಥದಲ್ಲಿ ಕೂರಿಸಲಾಯಿತು ರಥದ ಗಾಲಿಗಳಿಗೆ ಪೂಜೆ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಜಯ ಘೋಷ ಹಾಕುತ್ತಾ ರಥದ ಹಗ್ಗ ಹಿಡಿದು ಮುಂದಕ್ಕೆ ಎಳಿಯುತ್ತಿದ್ದಂತೆ ನವ ವಧು ವರರು ಹಾಗೂ ಭಕ್ತರು ರಥದ ಕಲಶಕ್ಕೆ ದವನ ಬಾಳೆಹಣ್ಣು ತೂರಿ ತಮ್ಮ ಭಕ್ತಿ ಸಮರ್ಪಿಸಿದರು
ಇದೇ ಸಂದರ್ಭದಲ್ಲಿ ಬಂದ ಭಕ್ತಾದಿಗಳಿಗೆ ಪಾನಕ ಪಲಹಾರ ವಿತರಿಸಿದರು