ಬೇಲೂರು : ಇತ್ತೀಚಿನ ದಿನಗಳಲ್ಲಿ ಜನ್ಮದಿನ ಇನ್ನಿತರ ಕಾರ್ಯಕ್ರಮಗಳಲ್ಲಿ ದುಂದುವೆಚ್ಚ ಮಾಡದೆ ಸಮಾಜಕ್ಕೆ ಯಾವುದಾದರೊಂದು ಉತ್ತಮ ಸಂದೇಶವನ್ನು ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮತ್ತು ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಇವರ ಸುಪುತ್ರಿ ರೇವತಿಪ್ರೀಯ ಜನ್ಮ ದಿನದ ಅಂಗವಾಗಿ ಯಾವುದೇ ಆಡಂಬರದ ದುಂದುವೆಚ್ಚ ನಡೆಸದೆ ೧೧೦ ಮಂದಿ ಯಿಂದ ಸ್ವಯಂ ಪ್ರೇರಿತರಾಗಿ ನೇತ್ರದಾನ ಶಿಬಿರ ಮಾಡುತ್ತಿರುವುದು ನಿಜಕ್ಕೂ ಸಮಾಜಮುಖಿಯಾಗಿದೆ ಎಂದು ಪುರಸಭಾ ಅಧ್ಯಕ್ಷ ಎ.ಆರ್.ಆಶೋಕ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಎಂಆರ್‌ವಿ ಗೆಳೆಯರ ಬಳಗ ಮತ್ತು ಬೇಲೂರು ಲಯನ್ಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯ ತಾನು ಸತ್ತ ಮೇಲೂ ಬದುಕಲೂ ಹಲವು ಮಾರ್ಗಗಳಲ್ಲಿ ನೇತ್ರದಾನ ಮುಖ್ಯವಾಗಿದೆ.
ಮರಣ ನಂತರದ ಬಳಿಕ ನೀಡಿದ ನಿಮ್ಮ ಕಣ್ಣುಗಳು ಅಪಘಾತದಿಂದ ದೃಷ್ಟಿ ಕಳೆದುಕೊಂಡ ಜನರಿಗೆ ಉಪಯೋಗವಾಗುವ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ನಡೆಸಬೇಕಿದೆ. ಕಾರಣ ಇತ್ತೀಚಿನ ದಿನದಲ್ಲಿ ರಕ್ತದ ಕೊರತೆ, ಕಿಡ್ನಿ,ಲೀವರ್ ಅಂಗಾಂಗಗಳ ಅವಶ್ಯರುವ ಹಿನ್ನಲೆಯಲ್ಲಿ ಇಂದಿನ ಕಾರ್ಯಕ್ರಮ ಅತ್ಯುತ್ತಮವಾಗಿದ್ದು ನಾವ ಸಹ ಸ್ವಯಂ ಪ್ರೇರಿತರಾಗಿ ಇಂದು ನೇತ್ರದಾನ ಮಾಡುತ್ತಿದ್ದೇವೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಬೇಲೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ,ನೇತ್ರದಾನ ಹಲವು ದಾನಗಳಲ್ಲಿ ಪವಿತ್ರವಾದ ದಾನವಾಗಿದೆ.ಮರಣದ ಬಳಿಕ ನೀಡುವ ಕಣ್ಣುಗಳು ಇನ್ನೊಬ್ಬರ ಬಾಳಿಗೆ ಬೆಳಕು ನೀಡಲಿವೆ. ಇಂತಹ ಸಾರ್ಥಕತೆಯಲ್ಲಿ ತಾವುಗಳು ಕೂಡ ಭಾಗುಯಾಗುವ ಮೂಲಕ ಮಣ್ಣು ಇಲ್ಲವೇ ಸುಟ್ಟು ಬೂದಿಯಾಗುವ ಬದಲು ದಾನ ಮಾಡಬೇಕಿದೆ.
ಕಳೆದ ಭಾರಿ ಕೂಡ ಎಂಆರ್‌ವಿ ಗೆಳೆಯರ ಬಳಗ ಗೋಪಿನಾಥ್ ಜನ್ಮದಿನವನ್ನು ದುಂದುವೆಚ್ಚ ಮಾಡದೆ ನೂರಾರು ಜನರಿಂದ ರಕ್ತದಾನಕ್ಕೆ ಪ್ರೇರಣೆ ನೀಡಿದ್ದಾರೆ. ಡೆಂಗ್ಯೂ ಇನ್ನಿತರ ಕಾಯಿಲೆಗಳಿಂದ ಸದ್ಯ ರಕ್ತದ ಅವಶ್ಯರುವ ಹಿನ್ನಲೆಯಲ್ಲಿ ರಕ್ತದಾನ, ಅಂಗಾಂಗಗಳ ದಾನಕ್ಕೆ ಜನರು ಮುಂದಾಗಬೇಕು ಎಂದು ಕರೆ ನೀಡಿದರು.
ಸಮಾಜಸೇವಕಿ ರೇವತಿ ಪ್ರಿಯ ಕಾರ್ತಿಕ್ ಮಾತನಾಡಿ ಪ್ರತಿವರ್ಷವೂ ಸಹ ನಮ್ಮ ಹುಟ್ಟುಹಬ್ಬವನ್ನು ಸಮಾಜಮುಖಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಕಳೆದ ವರ್ಷ ೧೬೦ ಕ್ಕೂ ಹೆಚ್ಚು ಜನರು ರಕ್ತ ದಾನ ಮಾಡುವ ಮೂಲಕ ಆಚರಿಸಿದ್ದೆವು.
ನೇತ್ರದಾನದ ಮಹತ್ವ ಸಾರಿದಂತಹ ನಮ್ಮೆಲ್ಲರ ಕಣ್ಮಣಿ ಡಾ ಪುನಿತ್ ರಾಜ್ ಕುಮಾರ್ ಅವರ ಪ್ರೇರಣೆ ಹಾಗೂ ನಮ್ಮ ಮಾವನವರ ಸಾವಿನ ನಂತರ ಅವರ ಕಣ್ಣುಗಳನ್ನು ದಾನ ಮಾಡಿ ಇಗರರಿಗೂ ಪ್ರೇರಣೆಯಾದ ಹಿನ್ನಲೆಯಲ್ಲಿ ನಾನು ನನ್ನ ಕುಟುಂಬದವರು ಸೇರಿದಂತೆ ಇಂದು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಿದ್ದೇವೆ.
ನಾವು ಬದುಕಿದ್ದಾಗ ಏನು ಸಾಧನೆ ಮಾಡಿದ್ದೇವೆ ಎಂಬುದರ ಬದಲು ನಮ್ಮ ನಂತರ ನಮ್ಮ ಕಣ್ಣುಗಳು ಇತರರಿಗೆ ಬೆಳಕಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ.ಆದ್ದರಿಂದ ದಯಮಾಡಿ ಯಾರೂ ಸಹ ತಮ್ಮ ಮರಣದ ನಂತರ ಕಣ್ಣು ಗಳನ್ನು ಮಣ್ಣುಪಾಲು ಮಾಡದೆ ಇತರರಿಗೆ ದೀಪವಾಗಲು ದೃಷ್ಟಿ ನೀಡಲು ಮುಂದಾಗುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಪುರಸಭಾ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮತ್ತು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ಮಾತನಾಡಿದರು.
ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಉಪಾಧ್ಯಕ್ಷೆ ಉಷಾಸತೀಶ್, ಸದಸ್ಯರಾದ ಜಮಾಲ್ಲುದ್ದಿನ್, ಅಕ್ರಮಪಾಷ, ರತ್ನಸತ್ಯನಾರಾಯಣ್, ಪುಟ್ಟಸ್ವಾಮಿ, ಕರವೇ ಅಧ್ಯಕ್ಷ ಚಂದ್ರಶೇಖರ್ ಮುಖಂಡರಾದ ಬಸವಾಪುರ ರವೀಶ್, ಯುವಘಟಕದ ಅಧ್ಯಕ್ಷ ಆಶೋಕ್, ಸೌಮ್ಯ, ಗೋಪಿನಾಥ್,ಜಮೀಲಾತೌಪಿಕ್,ಸೌಮ್ಯ, ಎಂ.ಪಿ.ಪೂವಯ್ಯ, ಪ್ರಶಾಂತ್ ಶೆಟ್ಟಿ, ವೆಂಕಟೇಶ್,,ಇಕ್ಬಾಲ್, ಮಹೇಶ್, ಯೋಗೀಶ್ , ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.