ಸಕಲೇಶಪುರ : ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಇನ್ಫೋಸಿಸ್ ಕಂಪನಿಯಿಂದ ಉಚಿತವಾಗಿ ಸರಬರಾಜು ಆದ 25 ಕಂಪ್ಯೂಟರ್ ಗಳನ್ನು ಬಳಸಿ ಕರ್ನಾಟಕ ವಸತಿಶಿಕ್ಷಣ ಸಂಸ್ಥೆಗಳಸಂಘ ಬೆಂಗಳೂರು ಇವರಿಂದ ಸರಬರಾಜಾದ ಕಂಪ್ಯೂಟರ್ ಮೇಜು ಮತ್ತು ಖುರ್ಚಿಗಳನ್ನು ಬಳಸಿಕೊಂಡು ರೂಪಿಸಿದ ಕಂಪ್ಯೂಟರ್ ಕೊಠಡಿಯನ್ನು ಸಕಲೇಶಪುರ ಆಲೂರುಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಕಂಪ್ಯೂಟರ್ ಜ್ಞಾನ ಇಂದಿನ ಯುಗದಲ್ಲಿಅಗತ್ಯ ಮತ್ತು ಅನಿವಾರ್ಯವಾಗಿದೆ.ಹಾಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಶೈಕ್ಷಣಿಕವಾಗಿ ಕಂಪ್ಯೂಟರ್ ಬಳಕೆಗೆ ಪ್ರಾಧಾನ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಸ್ಥಳೀಯ ಶಾಸಕರಾಗಿ ಇನ್ಫೋಸಿಸ್ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದರು.
ಇದೇ ಸಂಧರ್ಭದಲ್ಲಿ ಶಾಲೆಯು 11 ವರ್ಷದಿಂದ ನಿರಂತರವಾಗಿ ಹೊರತರುತ್ತಿರುವ ಶಾಲಾಗೋಡೆ ವಾರಪತ್ರಿಕೆಯ 2024-25. ನೇ ಸಾಲಿನ ಮೊದಲ ಸಂಚಿಕೆ *ಚಿಗುರು* ಅನ್ನು ಬಿಡುಗಡೆಮಾಡಿ ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ಶಾಲಾವಾರಪತ್ರಿಕೆ ಸಹಕಾರಿಎಂದು ಶ್ಲಾಘಿಸಿದರು.
ಈಸಂದರ್ಭದಲ್ಲಿ ಶಾಲಾಪ್ರಾಂಶುಪಾಲರಾದ ಶತೇಂದ್ರಕುಮಾರ್,ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ಭಾಗ್ಯವತಿ ಹಾಗೂ ಬೋಧಕಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.