ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಮೂವತ್ತು ಶುಕ್ರವಾರದಂದು ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮೊದಲಿಗೆ ಎಲ್ಲರೂ ಮಣ್ಣಿಗೆ ಜಿವ ತುಂಬುವ ಜೀವಾತ್ಮ ,ನಮ್ಮ ಹೊಟ್ಟೆ ತುಂಬಿಸುವ ಅನ್ನದಾತ ಎನ್ನುತ ಎಲ್ಲಾ ರೈತ ಬಾಂಧವರನ್ನು ಮನದಲ್ಲಿ ನೆನೆಯುತ್ತ ಕಾರ್ಯಕ್ರಮವು ಆರಂಭಗೊಂಡಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ. ಕೆ.ಎನ್.ಮುನಿಸ್ವಾಮಿಗೌಡ ಡೀನ್(ಕೃಷಿ) ಕೃಷಿ ಮಹಾವಿದ್ಯಾಲಯ ಕಾರೆಕೆರೆ, ಹಾಸನ ಆಗಮಿಸಿದ್ದರು.ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಕೆ ಹೊಸಹಳ್ಳಿಯ ಸಹಸಂಯೋಜಕಿ ಡಾ.ವಿನೋದಾ ಶಂಕರ್ ನಾಯಕ್ ಕೃಷಿ ವಿಸ್ತರಣಾ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಮತ್ತು ಡಾ.ಸದಾಶಿವನಗೌಡ ಸಹಸಂಯೋಜಕರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಹಾಗೂ ಸರಕಾರಿ ಕಿರಿಯ‌ ಪ್ರಾಥಮಿಕ ಶಾಲೆ ಕೆ ಹೊಸಹಳ್ಳಿಯ ಶಿಕ್ಷಕರಾದ ಚಂದ್ರೇಗೌಡರು,ಪ್ರಗತಿಪರ ರೈತರಾದ ದೀಪಕ್ ,ಹಾಗೂ ಊರಿನ ಮುಖಂಡರಾದಂತಹ ಸಿದ್ದೇಗೌಡರು ಕಾರ್ಯಕ್ರಮಕ್ಕೆ ಹಾಜರಿದ್ದರು.

ಇವರೆಲ್ಲರನ್ನು ಸ್ವಾಗತ ಕೋರುತ್ತ ನಂತರದಲ್ಲಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ಎಂಬುದು ಗ್ರಾಮೀಣ ಸಮುದಾಯಗಳನ್ನು ,ಅವುಗಳ ಅಭಿವೃದ್ಧಿ,ಸಮಸ್ಯೆಗಳನ್ನು ಮತ್ತು ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಬಳಸುವ ಒಂದು ಕ್ರಿಯಾತ್ಮಕ ವಿಧಾನವಾಗಿದೆ. ಈ ಪದ್ದತಿಯಲ್ಲಿ ಗ್ರಾಮಸ್ಥರನ್ನೆ ತಮ್ಮ ಜೀವನದ ಬಗ್ಗೆ ಮಾತನಾಡುವ ಹಾಗೂ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದ ಶೀರ್ಷಿಕೆಯು “ಕರ್ಷಕ ಕಿರಣ” ಇದು ರೈತರು ದೇಶಕ್ಕೆ ತರುತ್ತಿರುವ ಆಶಾಕಿರಣ ಮತ್ತು ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದರ್ಥ.

ನಂತರದಲ್ಲಿ ಡಾ.ಕೆ.ಎನ್.ಮುನಿಸ್ವಾಮಿಗೌಡ ಡೀನ್(ಕೃಷಿ) ಕೃಷಿ ಮಹಾವಿದ್ಯಾಲಯ ಕಾರೆಕೆರೆ, ಹಾಸನ ಇವರು ನೇಗಿಲಿಗೆ ಪೂಜಿಸುತ್ತ ಹಾಗೂ ಉದ್ಘಾಟನಾ ಪಟ್ಟಿಯನ್ನು ಕತ್ತರಿಸುತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಊರಿನ ಸಂಪನ್ಮೂಲ ನಕ್ಷೆಯಲ್ಲಿ ತಮ್ಮ ಮನೆಗಳ ಗುರುತಿಸುವಲ್ಲಿ ಯಶಸ್ವಿಯಾದರು,ನಂತರದಲ್ಲಿ ಸಮಯವಾರು ನಕ್ಷೆ,ಚಲನಾವಲನ ನಕ್ಷೆ, ರೈತರ ಆಯ್ಕೆ,ಸಮಸ್ಯಾತ್ಮಕ ವೃಕ್ಷ,ಜೀವ ಸಂಪನ್ಮೂಲ ನಕ್ಷೆ, ಮಳೆಯ ಪ್ರಮಾಣ,ಚಪಾತಿ ನಕ್ಷೆ,ಹಾಗೂ ಋತುಮಾನ ಚಕ್ರದ ಮಾದರಿಗಳಲ್ಲಿ ರೈತರನ್ನು ಕೃಷಿ ವಿದ್ಯಾರ್ಥಿಗಳು ತೊಡಗಿಕೊಂಡರು.

ನಂತರದಲ್ಲಿ ಡಾ.ಕೆ.ಎನ್ ಮುನಿಸ್ವಾಮಿಗೌಡ ಡೀನ್(ಕೃಷಿ) ಕೃಷಿ ಮಹಾವಿದ್ಯಾಲಯ ಹಾಸನ ಇವರು ಕಾರ್ಯಕ್ರಮದ ಬಗ್ಗೆ ಒಂದೆರಡು ಹಿತನುಡಿಗಳನ್ನು ಹೇಳಿದರು.

ಊರಿನ ಜನರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದು ಹೊಗಳಿದರು ನಂತರದಲ್ಲಿ ಕೃಷಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರೈತರ ಆಸಕ್ತಿಯ ಅನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು.

ಹಾಗೂ ಸ.ಹಿ.ಪ್ರಾ.ಶಾಲೆಯ ಶಿಕ್ಷಕರಾದ ಚಂದ್ರೇಗೌಡರು ವಿದ್ಯಾರ್ಥಿಗಳು ಸಾಂಪ್ರಾದಾಯಿಕ ಪದ್ದತಿಗಳನ್ನು ಮತ್ತೆ ಮರುಕಳಿಸಿದರು ಎಂದು ಹೊಗಳಿದರು.

ದೀಪಕ್ ಅವರು ಊರಿನ ಬೆಂಬಲ ಸದಾಕಾಲ ಇರುತ್ತದೆ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ನಂತರದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸುತ್ತ ಕಾರ್ಯಕ್ರಮವು ಯಶಸ್ವಿಯಾಗಿತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed