
ಸಕಲೇಶಪುರ :- ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಜಾತಿ, ಧರ್ಮ, ಜನಾಂಗಕ್ಕೆ ಸೀಮಿತವಾದದ್ದಲ್ಲ.ಕನ್ನಡ ನೆಲ, ಜಲ, ಭಾಷೆಯ ವಿಚಾರಕ್ಕೆ ಪ್ರತಿಯೊಬ್ಬ ಕನ್ನಡಿಗರು ಒಗ್ಗಟ್ಟಾಗಬೇಕು ಎಂದು ಹಾಸನ ಜಿಲ್ಲಾ ಕರವೇ ಅಧ್ಯಕ್ಷರಾದ ಸಿ.ಡಿ ಮನು ಕುಮಾರ್ ಹೇಳಿದರು.
ಸಕಲೇಶಪುರ ತಾಲ್ಲೂಕು ಕರವೇ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಅಧ್ಯಕ್ಷರಾದ ಸಿ. ಡಿ ಮನುಕುಮಾರ್ ನೇತೃತ್ವದಲ್ಲಿ ಲಯನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕ.ರ.ವೇ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಸೀತಾರಾಮ್ ಮಾತನಾಡಿ ಜಿಲ್ಲೆಯಲ್ಲಿ ಮನುಕುಮಾರ್ ಗೆ ಕೊಡುತ್ತಿರುವ ಸಹಕಾರವನ್ನು ನೂತನ ಸಕಲೇಶಪುರ ತಾಲ್ಲೂಕು ಕ.ರ.ವೇ ಅಧ್ಯಕ್ಷರಾದ ಗಗನ್ ಹಾಡ್ಲಹಳ್ಳಿ ಅವರಿಗೆ ಕೊಡಿ ಎಂದು ಹೇಳಿದರು.ಈ ತಾಲ್ಲೂಕಿನ ಅನೇಕ ಮೂಲಭೂತ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಕಾರವಾಗಲಿದೆ.ಎಲ್ಲಾ ನೂತನ ಪದಾಧಿಕಾರಿಗಳು ಸಮಾಜಕ್ಕೆ ಪಾರದರ್ಶಕವಾಗಿ ಕೆಲಸ ಮಾಡುವಂಥಾಗಲಿ ಎಂದು ಹೇಳಿದರು.
ನೂತನ ಅಧ್ಯಕ್ಷರಾದ ಗಗನ್ ಹಾಡ್ಲಹಳ್ಳಿ ಮಾತನಾಡುತ್ತಾ ನಾಡು ನುಡಿ ಜಲ ವಿಚಾರದಲ್ಲಿ ಮುಂದಿನ ದಿನದಲ್ಲಿ ನಮ್ಮ ಸಂಘಟನೆಯಿಂದ ಹಮ್ಮಿಕೊಳ್ಳುವ ಹೋರಾಟಕ್ಕೆ ಎಲ್ಲರ ಬೆಂಬಲ ಇರಲಿ ಎಂದು ಹೇಳಿದರು.
ತಾಲ್ಲೂಕು ನೂತನ ಅಧ್ಯಕ್ಷರಾಗಿ ಗಗನ್ ಹಾಡ್ಲಹಳ್ಳಿ ನೇಮಕಗೊಂಡಿದ್ದರು. ಉಪಾಧ್ಯಕ್ಷರಾಗಿ ಸುನಿಲ್, ಸುಮನ್ ಹೆತ್ತೂರು, ಶಿವಕುಮಾರ್ ತಡಕಲು, ಕೃಷ್ಣಪ್ಪ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ಜಯಕುಮಾರ್. ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಯಶಸ್ ಕೆ.ಎಂ. ಕೌಡಳ್ಳಿ, ಉಪಾಧ್ಯಕ್ಷರಾಗಿ ಪ್ರಜ್ವಲ್ ವಿ.ಆರ್ ನಗರ ಘಟಕದ ಅಧ್ಯಕ್ಷರಾಗಿ ಹೇಮಂತ್ ಗೌಡ ಸಕಲೇಶಪುರ, ಉಪಾಧ್ಯಕ್ಷರಾಗಿ ನಿಶ್ಚಯ್ ಜಾನಕೆರೆ,ಕಸಬಾ ಹೋಬಳಿ ಘಟಕದ ಅಧ್ಯಕ್ಷರಾಗಿ ಸಿದ್ದಾರ್ಥ್ ಪಟೇಲ್, ಉಪಾಧ್ಯಕ್ಷರಾಗಿ ಸೃಜನ್ ಗೌಡ, ಹಾನುಬಾಳು ಹೋಬಳಿ ಘಟಕದ ಅಧ್ಯಕ್ಷರಾಗಿ ಗಗನ್ ಹೆಚ್.ಎಲ್. ಹುರುಡಿ, ಉಪಾಧ್ಯಕ್ಷರಾಗಿ ಅಪೂರ್ವ ದೇವಲಕೆರೆ ಯಸಳೂರು ಹೋಬಳಿ ಘಟಕದ ಅಧ್ಯಕ್ಷರಾಗಿ ಸಂತೋಷ್ ಅಡ್ರಹಳ್ಳಿ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಯೆಡಕೇರಿ ಆಟೋ ಘಟಕದ ಅಧ್ಯಕ್ಷರಾಗಿ ಸೋಮಶೇಖರ್ (ಸ್ವಾಮಿ) ಉಪಾಧ್ಯಕ್ಷರಾಗಿ ಸಂತೋಷ, ಮಹೇಶ್, ಯೋಗೇಶ್ ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷರಾಗಿ ದೀಪಕ್ ಹೆತ್ತೂರು ಉಪಾಧ್ಯಕ್ಷರಾಗಿ ಪವನ್ ಗೌಡ ಆಯ್ಕೆ ಆದರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ದಿನೇಶ್, ಸಕಲೇಶಪುರ ಆಲೂರು ಉಸ್ತುವಾರಿ ರಘು ಪಾಳ್ಯ, ಆಲೂರು ತಾಲ್ಲೂಕು ಅಧ್ಯಕ್ಷರಾದ ನಟರಾಜ್ ಉಪಸ್ಥಿತರಿದ್ದರು.
