ಸಕಲೇಶಪುರ : ತಾಲ್ಲೂಕಿನ ಬಸ್ ನಿಲ್ದಾಣದಿಂದ ಪ್ರತಿನಿತ್ಯ ನೂರಾರು ಬಸ್ ಗಳು ಸಂಚರಿಸುವ ಈ ಮಾರ್ಗದ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ರಸ್ತೆ ಹಾಳಾಗಿದ್ದು, ಇಲಾಖೆಯವರು ಈ ಕುರಿತು ಮೌನ ವಹಿಸಿರುವುದು ಆಶ್ಚರ್ಯ ಮೂಡಿಸಿದೆ.
ಪ್ರತಿನಿತ್ಯ ಸಹಸ್ರಾರು ಪ್ರಯಾಣಿಕರು ಆಗಮಿಸುವ ಹಾಗೂ ನಿರ್ಗಮಿಸುವ ಈ ಸ್ಥಳದ ರಸ್ತೆ ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿ ತಲುಪಿದೆ.
ಈ ಬಗ್ಗೆ ಕರವೇ (ಪ್ರವೀಣ್ ಶೆಟ್ಟಿ ಬಣ) ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಂದ ಕೇವಲ ಹುಡಾಫೆ ಉತ್ತರ ಬಂದಿರುತ್ತದೆ.
ಇದು ಜನಸಾಮಾನ್ಯರು ನಿತ್ಯ ಬಳಸುವ ಬಸ್ ನಿಲ್ದಾಣದ ರಸ್ತೆ . ಮಹಿಳೆಯರು ಮಕ್ಕಳು ವಿದ್ಯಾರ್ಥಿಗಳು ಅಶಕ್ತರು ವೃದ್ದರು ರೋಗಿಗಳು ಕೂಡ ಬಸ್ ಮೂಲಕ ಸಂಚರಿಸುವುದರಿಂದ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು.
ಇನ್ನು 3 ದಿನಗಳ ಒಳಗಾಗಿ ಈ ರಸ್ತೆಯನ್ನು ಉತ್ತಮ ಗುಣಮಟ್ಟದ ಕಾಮಗಾರಿ ಮೂಲಕ ದುರಸ್ಥಿಪಡಿಸದಿದ್ದರೆ ಬಸ್ ನಿಲ್ದಾಣದ ಒಳಗೆ ಬಸ್ ಗಳು ಬರುವುದನ್ನೇ ತಡೆದು ಪ್ರತಿಭಟಿಸಬೇಕಾದ ಅನಿವಾರ್ಯತೆಯ ಸಂದರ್ಭ ಎದುರಾಗುತ್ತದೆ ಎಂದು ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಎಚ್ಟರಿಸಿದ್ದಾರೆ.