
ಆಲೂರು : ಸಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹ ಶಿಕ್ಷಕಿ ನಾಗವೇಣಿ ಯವರು ದೇವರಾಜ್ ಎಸ್ ಎಲ್ ರವರು ಸುಧೀರ್ಘ 33 ವರ್ಷಗಳ ಕಾಲ ಶಿಕ್ಷಕ ವೃತ್ತಿಯ ಸೇವೆಯನ್ನು ಸಲ್ಲಿಸಿ ವಯೋ ನಿವೃತ್ತಿ ಪಡೆದರು. ಅವರಿಗೆ ಸಿಂಗಾಪುರ ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಅಬಿನಂದನೆಗಳನ್ನು ತಿಳಿಸಿ ಶುಭಾಶಯ ಕೋರಲಾಯಿತು
ಇದೆ ಸಂದರ್ಭದಲ್ಲಿ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್ ಎನ್ ಪ್ರಕಾಶ್, ಕರವೇ ಜಿಲ್ಲಾ ಕಾರ್ಯದರ್ಶಿರಘು ಪಾಳ್ಯ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸಿವಿ ಲಿಂಗರಾಜ್, ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು, ಪಾಳ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ವಥ್, ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ , ಭವ್ಯ ಪುರುಷೋತ್ತಮ್ ಶಿಕ್ಷಕ ದೇವೇಂದ್ರಪ್ಪ, ಕುಮಾರ್, ವಿನೋದ್, ಜಯಣ್ಣ , ರವಿ ಹಾಗೂ ಆಲೂರು ತಾಲೂಕಿನ ವಿವಿಧ ಶಾಲಾ ಶಿಕ್ಷಕರುಗಳು ಇನ್ನು ಮುಂತಾದವರು ಹಾಜರಿದ್ದರು.




