ಸಕಲೇಶಪುರ : ನಗರ ಠಾಣೆಯ 100 ಮೀಟರ್ ಅಂತರದ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ KA 21 M 8399 ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಪ್ಯಾಕೇಟ್ ಮಾಡಿದ್ದ ಗೋಮಾಂಸ ಮಾರಾಟ ಮಾಡಲಾಗುತ್ತಿದ್ದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಖಚಿತವಾದ ಮಾಹಿತಿ ಆಧರಿಸಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.

ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಕಾರಿನ ಹಿಂಭಾಗದಲ್ಲಿ ಪ್ಯಾಕೇಟ್’ನಲ್ಲಿ ಗೋಮಾಂಸ ಇಡಲಾಗಿತ್ತು. ಅಲ್ಲೇ ವಿಚಾರಿಸಿದಾಗ ಮನೆಯಲ್ಲಿ ಕಾರ್ಯಕ್ರಮ ಇದೆ ಆಗಾಗಿ ತೆಗೆದುಕೊಂಡು ಹೋಗುತ್ತಿರುವುದು ಎಂದು ಹೇಳಿದ್ದಾನೆ.

ಠಾಣೆಗೆ ತಂದು ಮತ್ತೋಮ್ಮೆ ವಿಚಾರಣೆ ನಡೆಸಿದಾಗ ಮಾರಾಟ ಮಾಡಲಾಗುತ್ತಿದ್ದು ಬೆಳಕಿಗೆ ಬಂದಿದೆ. ನಗರ ಠಾಣೆಯ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed