ಸಕಲೇಶಪುರ :- ಒಂದು ವಾರದಿಂದ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೈನೆ ಮರದ ಹಣ್ಣುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದಾರೆದು ವಳಲಹಳ್ಳಿ ಬೆಳೆಗಾರರ ಸಂಘದ ಮಾಸಿಕ ಸಭೆಯಲ್ಲಿ ಕೆಲವು ಬೆಳೆಗಾರರು ಕೊಟ್ಟ ದೂರಿನ ಮೇರೆಗೆ ಚರ್ಚೆ ನಡೆಸಲಾಗಿತ್ತು.

ಇಲ್ಲಿಂದ ಕೇರಳಕ್ಕೆ ತೆಗೆದುಕೊಂಡು ಹೋದ ಬೈದೆ ಮರದ ಹಣ್ಣುಗಳನ್ನು ಅಡಿಕೆಯೊಂದಿಗೆ ಮಿಶ್ರಣ ಮಾಡಿ ತಂಬಾಕು ರೀತಿ ಇದನ್ನು ಮತ್ತೆ ಜನರಿಗೆ ತಿನ್ನಲು ಕೊಡುತ್ತಿದ್ದಾರೆ .ಇದರಿಂದ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅಲ್ಲದೆ ಈ ಕಲಬೆರಕೆಯಿಂದ ಅಂತರಾಷ್ಟ್ರೀಯ ಮಟ್ಟದ ಬೇಡಿಕೆ ಹೊಂದಿರುವ ಈ ಅಡಿಕೆಯು ಕಲಬೆರಿಕೆ ಎಂದಾಗ ಅಂತರಾಷ್ಟ್ರೀಯ ಮಾರುಕಟ್ಟೆಯ ದರದಲ್ಲಿ ಇಳಿಮುಖವಾಗಿ ಬೇಡಿಕೆ ನಿಲ್ಲುತ್ತದೆ ಎಂದು ಬೆಳೆಗಾರರು ಆರೋಪಿಸಿದರು.

ನಟೇಶ್ ಎಂಬ ಕೇರಳದ ವ್ಯಕ್ತಿ ಮಾರನಹಳ್ಳಿಯಲ್ಲಿ ಕೆಲವು ದಿನಗಳಿಂದ ತಮ್ಮ ವಾಸಕ್ಕೆ ಮನೆ ಬಾಡಿಗೆ ಮಾಡಿಕೊಳ್ಳುವ ಮೂಲಕ ಅಕ್ಕಪಕ್ಕದ ಊರಿನ ತೋಟಗಳಿಗೆ ಭೇಟಿ ನೀಡಿ ತೋಟದಲ್ಲಿ ಬೆಳೆದ ಬೈನೇಮರವನ್ನು ಗೊಬ್ಬರ ಮಾಡಲು ಉಪಯೋಗಿಸಲು, ಹಾಗೂ ಆಯುರ್ವೇದಿಕ ಔಷಧಿಯನ್ನು ತಯಾರಿಸಲು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ನೂರರಿಂದ 150 ರೂಪಾಯಿಗೆ ಒಂದು ಮರವನ್ನು ವಹಿಸಿಕೊಳ್ಳುವ ಮೂಲಕ ಅದರ ಗೊಂಚಲನ್ನು ಕಟ್ ಮಾಡಿ ಕೇರಳಕ್ಕೆ ಸಾಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ನೆನ್ನೆ ಸಂಜೆ ಕರಡಿಗಾಲ ಕೂಡಿಗೆಯಲ್ಲಿ ಸುಮಾರು 12 ಚೀಲ ಬೈನೆ ಮರದ ಹಣ್ಣುಗಳ ತುಂಬಿಸಿಟ್ಟಿದನ್ನು ನೋಡಿದ ಬೆಳೆಗಾರರ ಸಂಘದ ಸದಸ್ಯರು ಈ ಚೀಲವನ್ನು ತುಂಬಿಸಿಕೊಂಡು ಹೋಗಲು ಬಂದಿದ್ದ ವಾಹನವನ್ನು ತಡೆದು ವಿಚಾರಿಸಿದಾಗ, ಸರಿಯಾದ ಉತ್ತರವನ್ನು ನೀಡದೆ 2013 ರಲ್ಲಿ ಕಂಪನಿಯಿಂದ ಕೊಟ್ಟ ಲೆಕ್ಕ ಪತ್ರವನ್ನು ತೋರಿಸಿ ಹಾರಿಕೆ ಉತ್ತರ ನೀಡಿಡುತ್ತಿದ್ದ ಕೇರಳದ ಮೂಲದ ವ್ಯಕ್ತಿಗೆ ತರಾಟೆಗೆ ತೆಗೆದುಕೋಡಿದ್ದಾರೆ .

ಇನ್ನ ಇಲ್ಲಿಗೆ ವ್ಯಾಪಾರಕ್ಕೆ ಬರುವುದಿಲ್ಲ ನನ್ನ ಕಡೆಯಿಂದ ತಪ್ಪಾಗಿದೆ ಎಂದು ಹೇಳಿ ಅಲ್ಲಿಂದ ಹೊರಟುಹೋಗಿದ್ದಾನೆ. ಅಡಿಕೆಯ ಬೆಲೆ ಹಾಗೂ ಆರೋಗ್ಯ ದೃಷ್ಟಿಯಿಂದ ಬೆಳೆಗಾರರ ಸಂಘದ ಸದಸ್ಯರ ಮಾಡಿದ ಈ ಕೆಲಸಕ್ಕೆ ವ್ಯಾಪಕ ಪ್ರಸಂಸೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ವಳಲಹಳ್ಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಅರುಣ್ ಗೌಡ,ಸಹ ಕಾರ್ಯದರ್ಶಿ ಪುನೀತ್ ಜಾತಹಳ್ಳಿ, ಜಂಟಿ ಕಾರ್ಯದರ್ಶಿ ಚಿದಾನಂದ,ನಿರ್ದೇಶಕರಾದ ದಿವಾಕರ್( ಪರಮೇಶ್ ) ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *