
ಹಾಸನ : ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ವೀರಶೈವ ಲಿಂಗಾಯತ ಸಮಾಜದ ನೌಕರರು ಸಹಕಾರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ಎಂದು ದಿನಾಂಕ 28-12-2024 ರಂದು ಸಂಜೆ ಹಾಸನ ಶ್ರೀ ತಣ್ಣೀರು ಹಳ್ಳ ಮಠದದಲ್ಲಿ ತಣ್ಣೀರು ಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯ ಕುಮಾರ್ ಸ್ವಾಮಿಜಿ ರವರ ಸಾನಿಧ್ಯ ದಲ್ಲಿ ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2025 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿಡಲಾಯಿತು
ನಂತರ ಮಾತನಾಡಿದ ಶ್ರೀ ವಿಜಯ ಕುಮಾರ್ ಸ್ವಾಮಿಜಿ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ನೌಕರರಾದ ನಿವು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನಿಡಿದರು ಧಾರ್ಮಿಕ ಚಿಂತನೆಗಳು. ಮಕ್ಕಳಿಗೆ ಲಿಂಗಾಧಾರಣೆ. ಮಾಡಿಸುವುದು ಹಾಗೂ ಪೂಜೆ ಪುನಸ್ಕಾರಗಳು ಮಾಡುವ ಮೂಲಕ ಉತ್ತಮ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಸಮಾಜ ಮುಖೀಯಾಗಿ ಕಾರ್ಯ ನಿರ್ವಹಿಸಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ಮಾತನಾಡಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ಇಲ್ಲಿವರೆಗೆ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಇನ್ನು ಮುಂದೆ ಅದರು ಹಾಸನ ಜಿಲ್ಲಾ ಕೇಂದ್ರದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಾಸ್ಟೆಲ್ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಹಳ್ಳಿಯಿಂದ ಬಸ್ ಸೌಲಭ್ಯವಿಲ್ಲದೆ . ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮಾಡಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ ಹಾಗೂ ಹೊರ ಜಿಲ್ಲೆಗಳಿಂದ ತಾಂತ್ರಿಕ ಶಿಕ್ಷಣ ಮತ್ತು ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ನಾವು ಹಾಗೂ ವೀರಶೈವ ಲಿಂಗಾಯತ ಸಮಾಜದವರು ಒಟ್ಟಾಗಿ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕಾಗಿದೆ.
ಸದ್ಯದಲ್ಲಿಯೇ ಸಮಾಜದ ಮುಖಂಡರ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಬಸವ ಕೇಂದ್ರದ ಅಧ್ಯಕ್ಷ ರಾದ ಯು ಎಸ್ ಬಸವರಾಜು. ಹಾಸನ ತಣ್ಣೀರು ಹಳ್ಳ ಮಠದ ಅಭೀವೃದ್ದಿ ಸಮೀತಿ ಕಾರ್ಯದರ್ಶಿ ಸೋಮಣ್ಣ, ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾದ ಅಶೋಕ್. ಗೌರವಾಧ್ಯಕ್ಷ ಶಿವಪ್ಪ.,(ಸಂಪತ್,) ಉಪಾಧ್ಯಕ್ಷರಾದ ಕೆ. ಎಸ್. ಜಗದೀಶ್, ಪ್ರದಾನ ಕಾರ್ಯದರ್ಶಿ ಹೆಚ್ .ಆರ್ .ನಟರಾಜ್, ಖಜಾಂಚಿ ಎಂ .ಜಿ. ಮೋಹನ್ ಕುಮಾರ್. ನಿರ್ದೇಶಕರಾದ ಶಶಿಕಲಾ, ಎನ್. ಪರಮೇಶ್, ಪಿ .ಎನ್.ಧರ್ಮಪ್ಪ, ಕೆ. ಪಂಚಾಕ್ಷರಿ, ಹೆಚ್ .ಎನ್. ಓಂಕಾರ್ ಮೂರ್ತಿ, ಎಂ .ಕೆ. ವೇದಾಂತ್, ಆರ್. ಪರಮೇಶ್. ಮತ್ತೀತರರು ಉಪಸ್ಥಿತರಿದ್ದರು.

