ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನ, ಸಕಲೇಶಪುರ
ಭಕ್ತಾಧಿಗಳಲ್ಲಿ ವಿನಂತಿ, ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರುಷ ೧೯೪೧ನೇ ಶ್ರೀಮತ್ ಕ್ರೋಧಿ ನಾಮ ಸಂವತ್ಸರದ ಮಾಘ ಮಾಸ ಶುದ್ಧ ತ್ರಯೋದಶಿಯಿಂದ ಮಾಘ ಬಹುಳ ದ್ವಿತೀಯದವರೆಗೆ ಅಂದರೆ 10-02-2025ನೇ ಸೋಮವಾರದಿಂದ 14-02-2025ರ ಶುಕ್ರವಾರದವರೆಗೆ “ಶ್ರೀಮನ್ನಖಿಲ ಗುಣಮಣಿ, ಮುಕುಟರತ್ನ ಶ್ರೇಣಿ, ವಿರಾಜಮಾನ ಪಾದಾಂಬುಜ ಶ್ರೀ ಪಾರ್ವತೀ ಪ್ರಾಣನಾಥ, ಜಟಾಮುಕುಟ ಕೋಟುರಬಾರ ಖಂಡೇಂದು ಶೇಖರ, ದುರಿತದಾವಾನಲ, ಕೈಲಾಸವಾಸ, ಭಕ್ತ ಜನೋದ್ಧಾರಕ” ಸುಮಾರು 2000 ವರ್ಷಗಳ ಹಿಂದೆ ಶಕ ವರುಷ ಶಾಲಿವಾಹನ ಮಹಾರಾಜರಿಂದ ಗೋಚರಗೊಳಿಸಲ್ಪಟ್ಟ ಸ್ವಯಂ ಭೂ ಪುರಾಣ ಪ್ರಸಿದ್ಧ”ಶ್ರೀ ಸಕಲೇಶ್ವರಸ್ವಾಮಿಯವರ ದಿವ್ಯ ಬ್ರಹ್ಮರಥೋತ್ಸವ”ಹಾಗೂ ಅದಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳು ನೆರವೇರಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವುಗಳು ಬಂಧು ಮಿತ್ರರೊಡಗೂಡಿ ಶ್ರೀ ಸಕಲೇಶ್ವರ ಸ್ವಾಮಿಯವರ ಸನ್ನಿಧಿಗೆ ಆಗಮಿಸಿ ಸ್ವಾಮಿಯವರ ಸೇವೆಯಲ್ಲಿ ಭಾಗಿಗಳಾಗಿ ಭಗವತ್ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಮಂಗಳಪ್ರದವಾದ ಈ ಶ್ರೀಮುಖ ನಿರೂಪದಿಂದ ಆಹ್ವಾನಿಸುತ್ತಿದ್ದೇವೆ.
ಕಾರ್ಯಕ್ರಮಗಳು :ತಾ 10-2-2025 : ಬೆಳಿಗ್ಗೆ 8-30 ರಿಂದ ಸ್ವಸ್ತಿವಾಚನ, “ಗಣಪತಿ ಹೋಮ”, ಪಂಚಾಮೃತ ಅಭಿಷೇಕ, ಸೋಮವಾರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ, ಸಂಜೆ 6-00 ರಿಂದ ಮೃತ್ಸಂಗ್ರಹಣ, ಅಂಕುರಾರ್ಪಣ, ಧ್ವಜಾರೋಹಣ, ಕಳಸ ಪ್ರತಿಷ್ಠಾಪನೆ.
ತಾ. 11-2-2025 : ಬೆಳಿಗ್ಗೆ 8-30 ರಿಂದ ಪಂಚಾಮೃತ ಅಭಿಷೇಕ, ಅಮ್ಮನವರಿಗೆ ಕುಂಕುಮಾರ್ಚನೆ, ಮಂಗಳವಾರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6-00 ರಿಂದ 9-00 ಗಂಟೆಯೊಳಗೆ “ಗಿರಿಜಾ ಕಲ್ಯಾಣ”, ಫಲಪೂಜಾ ಸುಮಂಗಲಿಯರಿಗೆ ಮಂಗಳದ್ರವ್ಯ ವಿತರಣೆ ಮತ್ತು ಪುಷ್ಪಾಲಂಕೃತ “ನಂದಿವಾಹನೋತ್ಸವ” ನಂತರ ಅನ್ನಸಂತರ್ಪಣೆ-ಪ್ರಸಾದ ವಿನಿಯೋಗ
ತಾ| 12-2-2025 : ಬೆಳಿಗ್ಗೆ 8-30 ರಿಂದ ಪಂಚಾಮೃತ ಅಭಿಷೇಕ, ವೇದಪಾರಾಯಣ ಪೂರ್ವಕ, ಪುಷ್ಪ ಗಂಥೋತ್ಸವ ಬುಧವಾರ ರಥ ಸನ್ನಿಧಿ ಪೂಜೆ, ಪೂರ್ವಾಹ್ನ 12-00 ರಿಂದ 12-45 ಗಂಟೆಯವರೆಗೆ ಸಲ್ಲುವ ವೃಷಭ ಲಗ್ನದಲ್ಲಿ “ಯಃ ಪಶ್ಯಂತಿ ರಥಾರೂಢಂ ಉಮಾಯ ಸಹಿತ ಶಿವಂ ತೇ ಸರ್ವಪಾಪ ನಿರುಕ್ತಾ ಶಿವಾನುಗ್ರಹ ಮಾಪ್ಪುಯಾತ್” ಎಂಬ ಮರ್ಯಾದೆಯಲ್ಲಿ “ದಿವ್ಯರಥಾರೋಹಣ” ಹಾಗೂ “ಬ್ರಹ್ಮ ರಥೋತ್ಸವ”
ತಾ 13-2-2025 : ಬೆಳಗ್ಗೆ 8-30 ರಿಂದ ಪಂಚಾಮೃತ ಅಭಿಷೇಕ ಹಾಗೂ ಬೆಳಿಗ್ಗೆ 11-00 ರಿಂದ ರಾಜಬೀದಿಯಲ್ಲಿ ಗುರುವಾರ “ದಿವ್ಯ ಪುಷ್ಪಾಲಂಕೃತ ರಥೋತ್ಸವ”ಮಧ್ಯಾಹ್ನ 12-00 ರಿಂದ ದೇವಸ್ಥಾನದ ಆವರಣದಲ್ಲಿ “ಮಹಾ ಅನ್ನಸಂತರ್ಪಣೆ”ಸೇವಾರ್ಥದಾರರು : ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ಗ್ರಾಮಸ್ಥರು ಹಾಗೂ ಸರ್ವ ಭಕ್ತಾದಿಗಳಿಂದ.
ತಾ 14-2-2025 : ಬೆಳಿಗ್ಗೆ 8-30 ರಿಂದ ಅವಬೃತೋತ್ಸವ, ತೀರ್ಥಸ್ನಾನ, ವಸಂತ ಸೇವೆ, ಮಹಾಮಂಗಳಾರತಿ, ಪ್ರಸಾದ ಶುಕ್ರವಾರ ವಿನಿಯೋಗ ಸಂಜೆ 6-00 ರಿಂದ ಪುಷ್ಪಾಂಲಕೃತ ಶಯನೋತ್ಸವ, ಮಹಾಮಂಗಳಾರತಿ.ತಾ 12-02-2025ನೇ ಬುಧವಾರ ಸಂಜೆ 5-00 ಗಂಟೆಗೆ “ರಂಗೋಲಿ ಸ್ಪರ್ಧೆ” ಏರ್ಪಡಿಸಿದೆ.
ಈ ಕಾರ್ಯಕ್ರಮ ಪ್ರಾಯೋಜಕರು : ಕೆನರಾ ಬ್ಯಾಂಕ್, ಸಕಲೇಶಪುರ. ಹಾಗೂ ಸಮಾಧಾನಕರ ಬಹುಮಾನ ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ ಮತ್ತು ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು
ಸೇವಾರ್ಥಿಗಳು ದಿನಾಂಕ : 9-2-2025 ರೊಳಗೆ ಸೇವಾ ವಿವರ ನೀಡಿ ದೇವಸ್ಥಾನದಲ್ಲಿ ಹಣವನ್ನು ಪಾವತಿಸಿ, ರಸೀತಿಯನ್ನು ಪಡೆಯಲು ಕೋರಿದೆ.