ಸಕಲೇಶಪುರ : ಏಕಾಗ್ರತೆ ಯಿಂದ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿದರೆ ಬದುಕಿನಲ್ಲಿ ಯಶಸ್ಸು ಸುಲಭವಾಗಿ ಸಾಧಿಸಬಹುದು ಎಂದು ನಗರ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ರವರು ಹೇಳಿದರು.

ಅವರಿಂದು ಪಟ್ಟಣದ ಸಂತ ಜೋಸೇಫರ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮೆರವಣಿಗೆ ನಡೆಸಿ ನಗರ ಠಾಣೆ ಬಳಿ ಬಂದು ಸೇರಿದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಿರಂತರ ಪರಿಶ್ರಮವನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯದ ಬದುಕು ಉಜ್ವಲ ವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಅವರು ಅಪ್ರಾಪ್ತ ವಯಸ್ಸಿನಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಅಪರಾಧ,ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ, ಈ ವರ್ಷದ ಹತ್ತು ದಿನಗಳ ಅವಧಿಯಲ್ಲಿ ನಾಲ್ಕು ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸಂತ ಜೋಸೇಫರ ಶಾಲಾ ಆವರಣದಿಂದ ಮೆರವಣಿಗೆ ಹೊರಟ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಘೊಷಣೆಗಳನ್ನು ಕೂಗುತ್ತಾ ವಾಹನ ಸವಾರರಿಗೆ ಜಾಗೃತಿ ಮೂಡಿಸುತ್ತಾ ಸಾಗಿಸಿದರು.

ಈ ಸಂದರ್ಭದಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹೆಲ್ಮೆಟ್ ಧರಿಸಿದವರು ಸೂಪರ್ ಸ್ಟಾರ್… ಸೀಟ್ ಬೆಲ್ಟ್ ಧರಿಸಿದವರು ಸೂಪರ್ ಸ್ಟಾರ್ ಘೋಷಣೆಗಳು ಮೊಳಗಿದವು.

ಪೋಲಿಸ್ ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಠಾಣೆಯಲ್ಲಿ ನ ದೈನಂದಿನ ನಡವಳಿಕೆಗಳ ಬಗ್ಗೆ ತಿಳಿದುಕೊಂಡರು.

ಠಾಣೆಗೆ ಭೇಟಿ ನೀಡಿದ ವಿಧ್ಯಾರ್ಥಿ ಗಳಿಗೆ ಪೋಲೀಸರು ಬಿಸ್ಕತ್ ಪೊಟ್ಟಣ ಗಳನ್ನು ನೀಡಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಪ್ರಿಯಾಂಕಾ, ರಾಜ್ಯ ಪ್ರತಿನಿಧಿ ಕೀರ್ತಿ ಕುಮಾರ್, ಸ್ಥಳೀಯ ಸಂಸ್ಥೆಯ ಅಧ್ಯಕ್ಷರೂ ವಕೀಲರೂ ಆದ ಆರ್ ಎನ್ ಕೃಷ್ಣ ಮೂರ್ತಿ, ಕಾರ್ಯದರ್ಶಿ ಮಲ್ನಾಡ್ ಜಾಕೀರ್ ಮಾತನಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಮೋಹನ್ ಕುಮಾರಿ,ದಿವ್ಯಾ ,ಸಂತೋಷ್ ಪೋಲೀಸ್ ಸಿಬ್ಬಂದಿ ಯವರಾದ ದೇವರಾಜ್, ಕೀರ್ತಿ, ಪೃಥ್ವಿ, ಶ್ರೀಧರ್,ಧರ್ಮೇಂದ್ರ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed