ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯ ಸಣ್ಣ ಕೃಷಿ ಜಗದೀಶ್ ರವರ ಮನೆಯ ಮುಂದೆ ಕಾಫಿ ಬಿಜವನ್ನು ಒಣಗಲು ಹಾಕಿದ್ದರು, ಸರಿಸುಮಾರು 70 ಸಾವಿರ ಬೆಲೆಯ ಕಾಫಿ ಬೆಳೆಯನ್ನು ರಾತ್ರಿವೇಳೆ ಕಳವು ಮಾಡಿದ್ದಾರೆ,
ಆಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಕಾಫಿ ಕಳ್ಳತನ ಪ್ರಕರಣಗಳು ತಾಲ್ಲೂಕಿನಲ್ಲಿ ಹೆಚ್ಚಾಗಿ ನಡೆಯುತ್ತಿರುವುದರಿಂದ ರೈತರು ಎಚ್ಚರಿಕೆಯಿಂದ ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಸ್ಥಳಕ್ಕೆ ಭೇಟಿ ನಿಡಿದ್ದ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಗಳು ಆದ ರಘು ಪಾಳ್ಯ ರೈತರಿ ಮನವಿ ಮಾಡುವುದರ ಜೊತೆಗೆ ಪೋಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು