ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ, ಹಾನುಬಾಳು ಕೆಪಿಎಸ್ ಶಾಲೆಯ ಪ್ರೌಢಶಾಲಾ ಆವರಣದಲ್ಲಿರುವ ಅರವತ್ತು ವರ್ಷಕ್ಕಿಂತ ಹಳೆಯದಾದ ಶಾಲಾ ಕೊಠಡಿಗಳು ಶಿಥಿಲಗೊಂಡು ಒಂದೊಂದೇ ಕೊಠಡಿಗಳ ಮೇಲ್ಚಾವಣಿಗಳು ಹಾಗೂ ಗೋಡೆಗಳು ಕುಸಿದು ಬೀಳುತ್ತಿದೆ.
ಎಸ್, ಡಿ, ಎಂ, ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ,ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಎಲ್ಲರೂ ಇದರ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ. ಮತ್ತು ಈ ಕ್ಷೇತ್ರದ ಶಾಸಕರಾದಂತಹ ಸಿಮೆಂಟ್ ಮಂಜುರವರಿಗೂ ಸಹ ತಿಳಿಸಿರುತ್ತೇವೆ,
ಈ ವಿಚಾರ ತಿಳಿದು ತಕ್ಷಣ ಶಾಸಕರಾದಂತಹ ಸಿಮೆಂಟ್ ಮಂಜು ರವರು ಆಗಮಿಸಿ ,ಶಿಕ್ಷಣ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿಯನ್ನು ಕೊಟ್ಟು ಆದಷ್ಟು ಬೇಗ ಅರವತ್ತು ವರ್ಷದ ಹಳೆಯ ಕಟ್ಟಡವನ್ನು ತೆರವು ಮಾಡಿಕೊಟ್ಟು, ಮಕ್ಕಳಿಗೆ ಯಾವುದೇ ರೀತಿಯ ಅವಗಡ ಸಂಭವಿಸ ಬಾರದೆಂದು ಸೂಚಿಸಿರುತ್ತಾರೆ .
ಆದರೂ ಸಹ , ಶಿಕ್ಷಣ ಇಲಾಖೆ ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಇದರ ಬಗ್ಗೆ ಗಮನ ಹರಿಸಿಲ್ಲ, ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳು ಬಂದು ಹೋಗಿ ಮೂರು ತಿಂಗಳಾದರೂ ಸಹ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ, ಇತ್ತೀಚಿಗೆ ಮೇಲ್ಚಾವಣಿಯ ಅಂಚು ಶಾಲೆಯ ವಿದ್ಯಾರ್ಥಿಗೆ ಬಿದ್ದು ವಿದ್ಯಾರ್ಥಿ ಗಾಯಗೊಂಡಿರುತ್ತಾನೆ.
ಆದ್ದರಿಂದ ಶುಕ್ರವಾರ ನಡೆದ ಮೀಟಿಂಗ್ನಲ್ಲಿ,ಎಸ್, ಡಿ, ಎಂ, ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ,ಗೌರವಾಧ್ಯಕ್ಷರು , ಉಪಾಧ್ಯಕ್ಷರು ,ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಹಾಗೂ ಪೋಷಕರು, ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಮೀಟಿಂಗ್ ನಡೆಸಲಾಯಿತು.
ಈ ಮೀಟಿಂಗ್ ನಲ್ಲಿ ಕೆಪಿಎಸ್ ಶಾಲೆಯ ಮೂರು ವಿಭಾಗದ ಕುಂದು ಕೊರತೆಗಳನ್ನು ಚರ್ಚಿಸಲಾಯಿತು ಹಾಗೂ ಹಳೆಯ ಶಾಲೆಯ ತೆರವಿನ ಬಗ್ಗೆಯೂ ಸಹ ಚರ್ಚಿಸಲಾಯಿತು.
ತುರ್ತಾಗಿ ಹಳೆಯ ಕಟ್ಟಡವನ್ನು ತೆರವು ಮಾಡದೆ ಇದ್ದಲ್ಲಿ ಎಸ್ ಡಿ ಎಂ ಸಿ ,ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಪೋಷಕರು ಎಲ್ಲರೂ ಸೇರಿ ಶಾಲೆಯಲ್ಲಿ ದರಣಿ ಹೋರಾಟ ಮಾಡಲಾಗುತ್ತದೆ .ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗ ಬೇಕಾಗುತ್ತದೆ.