ಸಕಲೇಶಪುರ : ಗೋ ಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಈ ಸಂಘಟನೆ ವತಿಯಿಂದ ರಾಜ್ಯವ್ಯಾಪಿ ನಡೆಯುತ್ತಿರುವ ನಂದಿ ರಥಯಾತ್ರೆಯು ಸೋಮವಾರಪೇಟೆಯಿಂದ ದಿನಾಂಕ 13-03-2025 ಗುರುವಾರ ಬೆಳಿಗ್ಗೆ 11 ಗಂಟೆಗೆ ಕೆರೋಡಿಗ್ರಾಮ ಕ್ಕೆ ತಲುಪಿತು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.

ನಂತರ ಪೂಜೆ ಪ್ರಸಾದ ಮುಗಿಸಿ ನಂತರ ಮಾಗಲು ಸರ್ಕಲ್ ಶುಕ್ರವಾರಸಂತೆ ಬ್ಯಾಕರವಳ್ಳಿಯಲ್ಲಿ ಕೋಡಿಹಳ್ಳಿ ಮಠದ ಶ್ರೀ ಶ್ರೀ ಶ್ರೀ ಶಿವಾಚಾರ್ಯ ಸ್ವಾಮೀಜಿಯವರು ರಥಕ್ಕೆ ಪೂಜೆ ಮಾಡಿ ಆಶೀರ್ವಾಚನ ನೀಡಿದರು

ನಂತರ ಕ್ಯಾನಹಳ್ಳಿಯಲ್ಲಿ ಪೂಜೆ ಮುಗಿಸಿ ಹುಲ್ಲಹಳ್ಳಿ ಯಲ್ಲಿ ಯಶಳೂರು ತೆಂಕಲುಗೋಡು ಮಠದ ಶ್ರೀ ಗಳಿಂದ ಪೂಜೆ ಮತ್ತು ಆಶೀರ್ವಚನ ನೀಡಿ ಗೋವುಗಳ ಸಂರಕ್ಷಣೆ ಬಗ್ಗೆ ತಿಳಿಸಿದರು.

ನಂತರ ಸಕಲೇಶಪುರದ ಹಳೆ ಬಸ್ ನಿಲ್ದಾಣದಿಂದ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ದವರೆಗೂ ಶೋಭ ಯಾತ್ರೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಿತು

ವೇದಿಕೆಯಲ್ಲಿ ಕರ್ನಾಟಕ ಗೋ ಸೇವಾ ಗತಿ ವಿಧಿ ಪ್ರಮುಖರಾದ ಧನುಶ್ ರವರು ಗೋ ಉತ್ಪನ್ನಗಳ ಬಗ್ಗೆ ಹಾಗೂ ಅವುಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧ್ಯಾಪಕರಾದ ಅಣ್ಣಪ್ಪ ಸ್ವಾಮಿಯವರು ಗೋ ಹತ್ಯ ನಿಷೇಧ ಕಾನೂನು ಸರಿಯಾದ ರೀತಿ ಅನುಷ್ಠಾನ ಆಗಬೇಕೆಂದು ಆಗ್ರಹಿಸಿದರು. ಜಿಲ್ಲಾ ಕಾರ್ಯವಾಹರಾದ ನವೀನ್ ಹೊಸಕೋಟೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕರಡಿಗಾಲ ಹರೀಶ್, ತಾಲೂಕು ಅಧ್ಯಕ್ಷರಾದಂತ ಬಿರಡಹಳ್ಳಿ ಬಾಲಕೃಷ್ಣ ತಾಲೂಕು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿಗಳಾದ ಲೋಹಿತ್ ಎಡವರಹಳ್ಳಿ ಸಹಕಾರ್ಯದರ್ಶಿ ಗಳಾದ ಹಾರ್ಲೆ ಕೂಡಿಗೆ ರವಿ ಹೆತ್ತೂರು ಪ್ರಖಂಡ ಅಧ್ಯಕ್ಷರಾದ ಯಶಳೂರು ರವಿತೇಜ ಕಾರ್ಯದರ್ಶಿಗಳಾದ ಹೆತ್ತೂರು ಸುರೇಶ್ ಉಪಸ್ಥಿತರಿದ್ದರು

ಸಮಾಜದ ಎಲ್ಲ ಬಂಧುಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿದರು..

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *