ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಮುಂಗಡ ಪತ್ರವನ್ನು ಮಂಡನೆ ಮಾಡಿದರು.

ಸಿದ್ದರಾಮಯ್ಯರ ಪ್ರಮುಖ 20 ಘೋಷಣೆಗಳು..

1.ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನಕ್ಕೆ ₹200

2.ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ಮಲ್ಟಿ ಸ್ಕ್ರೀನ್ ಸಮುಚ್ಛಯ

3.ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ ₹7,000 ಕೋಟಿ ಅನುದಾನ

4.ಬೆಂಗಳೂರಲ್ಲಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಟನಲ್ ಕಾರಿಡಾರ್

5.ಬೆಂಗಳೂರಲ್ಲಿ ಟನಲ್ ಕಾರಿಡಾರ್‌ಗೆ ₹19,000 ಕೋಟಿ ಅನುದಾನ

6.ಅಬಕಾರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ₹40,000 ತೆರಿಗೆ ಸಂಗ್ರಹ ಗುರಿ

7.ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ, ಬಾಳೆ ಹಣ್ಣು ವಿತರಣೆಗೆ ₹1,500 ಕೋಟಿ

8.ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂಪಾಯಿ ಏರಿಕೆ

9.ಅಂಗನವಾಡಿ ಸಹಾಯಕಿಯರಿಗೆ ₹750 ಸಹಾಯಧನ ಹೆಚ್ಚಳ

10.ಕೊಡಗಿನ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ

11.ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಯ ಉದ್ದೇಶ

12.ಚಿಂತಾಮಣಿ ತಾಲೂಕಿನಲ್ಲಿ 150 ಕೋಟಿ ವೆಚ್ಚದಲ್ಲಿ VTU ಘಟಕ ಕಾಲೇಜು

13.ಬಾಣಂತಿ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ

14.ನೋಂದಾಯಿತ ಕಾರ್ಮಿಕರ ಮರಣ ಪರಿಹಾರ ₹75,000ದಿಂದ ₹1.5 ಲಕ್ಷಕ್ಕೇರಿಕೆ

15.ಕೆಲಸದ ಸ್ಥಳದಲ್ಲೇ ಮೃತಪಟ್ರೆ ಕುಟುಂಬಸ್ಥರಿಗೆ ಪರಿಹಾರ ₹5 ರಿಂದ ₹8 ಲಕ್ಷಕ್ಕೇರಿಕೆ

16.ಸ್ವ ಸಹಾಯ ಗುಂಪು ಮಹಿಳೆಯರಿಗೆ ಅಕ್ಕ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆ

17.ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಸ್ವಸಹಾಯ ಸಂಘಗಳಿಗೆ ಸೊಸೈಟಿ

18.ಸ್ವ-ಸಹಾಯ ಸಂಘದ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆ

19.10 ನಗರ ಪ್ರದೇಶಗಳಲ್ಲಿ ಪ್ರಯೋಗಿಕವಾಗಿ ನಿರ್ವಹಣೆಗೆ ನೀಡಲಾಗುವುದು

20.ಸಂಕಷ್ಟದಲ್ಲಿರೋ ಪತ್ರಕರ್ತರಿಗೆ ಮಾಸಾಶನ 12,000 ದಿಂದ 15,000ಕ್ಕೆ ಏರಿಕೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *