
ಸಕಲೇಶಪುರ :-ನ್ಯಾಯಬೆಲೆ ಅಂಗಡಿಯವನೆ ಹೆಗ್ಗಣ ವಾದಾಗ ಸಾಮಾನ್ಯ ವಾಗಿ ಆಹಾರ ದಾನ್ಯ ಶೇಖರಣೆ ಮಾಡಿದ್ದಾಗ ಇಲಿಗಳು ಅ ಆಹಾರ ದಾನ್ಯವನ್ನ ತಿಂದು ತೇಗುವುದು ಸಹಜ ಅದೆ ಹೆಗ್ಗಣ ಸೇರಿದರೆ ಕತೆ ಮುಗಿದೆ ಹೋಯಿತು
ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರದಲ್ಲಿರುವ ಸಾರ್ವಜನಿಕ ಪಡಿತರ ವಿತರಣಾ ನ್ಯಾಯಬೆಲೆ ಅಂಗಡಿ ಯಲ್ಲಿ ನಡೆಯತ್ತಿರುವುದೆ ಅನ್ಯಾಯ, ಈ ಅಂಗಡಿಯ ಲೈಸನ್ಸ್ ಮಾಲೀಕ ಅವರೇಕಾಡು ಗ್ರಾಮದ A G ಹರಿಪ್ರಸಾದ್ ಹಲವಾರು ವರ್ಷಗಳಿಂದ ಈ ನ್ಯಾಯ ಬೆಲೆ ಅಂಗಡಿ ಯನ್ನು ನಡೆಸಿ ಕೊಂಡು ಬರುತಿದ್ದು, ಈ ವ್ಯಕ್ತಿ ಸರ್ಕಾರ ದಿಂದ ಕೊಡಮಾಡಿದ ಸಾರ್ವಜನಿಕ ರಿಗೆ ವಿತರಿಸಬೇಕಾದ ಪಡಿತರದಲ್ಲಿ ಕಮ್ಮಿ ಕೊಡುತ್ತಿದ್ದ ಬಗ್ಗೆ ಸಾರ್ವಜನಿಕರು ದೂರು ಇದ್ದು ಇಂದು ಸಾಕ್ಷಿ ಸಮೇತ ಸಿಕ್ಕು ಬಿದ್ದಿದ್ದಾನೆ.
ಸಕಲೇಶಪುರ ದ ಆಹಾರ ನಿರೀಕ್ಷಿಕರಿಗೆ ಸಾರ್ವಜನಿಕ ರು ದೂರು ನೀಡಿದ ಪರಿಣಾಮ ಇಂದು ಆಹಾರ ನಿರೀಕ್ಷಕರು ಅಂಗಡಿ ಮೇಲೆ ದಾಳಿ ಮಾಡಿ, ಕಾರ್ಡ್ ದಾರ ಪ್ರತಿ ಸದಸ್ಯರಿಗೆ 15 kg ಅಕ್ಕಿ ಕೊಡುವ ಬದಲು 10 kg ಕೊಡುತ್ತಿದ್ದು ಒಬ್ಬ ವ್ಯಕ್ತಿಯ ಮೇಲೆ 5kg ಅಕ್ಕಿಯನ್ನು ತನ್ನ ಜೇಬಿಗೆ ಹೊಡೆದು ಕೊಳ್ಳುತ್ತಿದ್ದ ಬಗ್ಗೆ ಪ್ರತ್ಯಕ್ಷ ವಾಗಿ ಸಾಕ್ಷಿ ಸಮೇತ ಹಿಡಿದಿದ್ದು, ಇವರ ಮೇಲೆ ಕಾನೂನು ಕ್ರಮ ಕೈ ಗೊಂಡು, ಇವರಿಗೆ ನೀಡಿದ ಪಡಿತರ ವಿತರಣೆ ನ್ಯಾಯ ಬೆಲೆ ಅಂಗಡಿಯ ಲೈಸನ್ಸ್ ರದ್ದು ಪಡಿಸಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟು ಇಲ್ಲಿ 850 ಕಾರ್ಡ್ ಗಳಿದ್ದು ಈ ಅವ್ಯವಹಾರ ದ ಆಳ ಅಗಲ ಎಷ್ಟಿದೆ ಅನ್ನುವುದೇ ಯಕ್ಷ ಪ್ರೆಶ್ನೆ

