
Iಅರೇಹಳ್ಳಿ: ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದಲ್ಲಿ ಶ್ರೀ ಉದ್ಭವ ಆದಿಶಕ್ತಿ ಕೆರೆಕೋಡಮ್ಮನವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ವಂಶಪಾರಂಪರತೆಯಿಂದ ನಡೆಸಿಕೊಂಡು ಬರಲಾಗುತ್ತಿರುವ ರಾಜ್ಯ ದೇವತೆ ಆದಿಶಕ್ತಿ ಅಮ್ಮನವರ ಜಾತ್ರಾ ಮಹೋತ್ಸವದ ನೇತೃತ್ವವನ್ನು ಪ್ರಧಾನ ಅರ್ಚಕ ಹೆಚ್.ಆರ್ ಚಂದ್ರಶೇಖರ್ ವಹಿಸಿಕೊಂಡಿದ್ದರು.
ಪೂಜೋತ್ಸವದ ಮೊದಲ ದಿನ ಕೆರೆಕೋಡಮ್ಮನವರಿಗೆ ರುದ್ರಾಭಿಷೇಕ ನೆರವೇರಿಸಿದ ಬಳಿಕ ಮಹಾಮಂಗಳಾರತಿ ಜರುಗಿತು. ಎರಡನೇ ದಿನ ಬೆಳಗ್ಗೆ ಅಮ್ಮ ನವರಿಗೆ ಗಂಗೆ ಪೂಜೆ, ಮಹಾ ಮಂಗಳಾರತಿ ನಡೆದು ಹಗಲು ಉತ್ಸವ ಮಾಡಲಾಯಿತು. ದೇವಸ್ಥಾನದ ವತಿಯಿಂದ ಹರಕೆ ಮುಡಿ ತೆಗೆಯವ ವ್ಯವಸ್ಥೆ ಹಾಗೂ ದೇವಿಗೆ ಕುಂಕುಮ ಮತ್ತು ಮಡಿಲಕ್ಕಿ ಅರ್ಪಿಸಲಾಯಿತು. ಹವಳಪ್ಪ ಸ್ವಾಮಿಯವರಿಗೆ ನೀರೋಕುಳಿ(ಕವಳ) ಕಾಠ್ಯಕ್ರಮ ಆಯೋಜಿಸಲಾಗಿತ್ತು.
ಕೆರೆಕೋಡಮ್ಮ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಕಡೇಗರ್ಜೆ ಗ್ರಾಮಸ್ಥರು, ದೇವಿ ಕುಟುಂಬದವರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜೋತ್ಸವವನ್ನು ಯಶಸ್ವಿಗೊಳಿಸಿದರು.
