ಸಕಲೇಶಪುರ : ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ .64 ರ ಸುಮಾರು 1.33 ಎಕರೆ ಸರ್ಕಾರಿ ಕೆರೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಮಣ್ಣು ಹಾಕಿ ಮುಚ್ಚುವ ಮೂಲಕ ಅಪಾರ ಬೆಲೆ ಬಾಳುವ ಹಾಲೆಬೇಲೂರು ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ. ಸರ್ಕಾರಿ ಕೆರೆಯನ್ನು ಮುಚ್ಚಿ ಲಪಟಾಯಿಸಲು ಪ್ರಯತ್ನ ನಡೆಸಲಾಗಿತ್ತು ಆ ಸಂದರ್ಭದಲ್ಲಿ ವಿಷಯ ತಿಳಿದ ಮಾನವ ಹಕ್ಕುಗಳ ಹೋರಾಟ ಸಮಿತಿಯ ಕಾರ್ಯಕರ್ತರು ಕೆರೆ ಒತ್ತುವರಿ ವಿರುದ್ದ ಹೋರಾಟ ಮಾಡುವ ಮೂಲಕ ಉಪವಿಭಾಗಾಧಿಕಾರಿ ಹಾಗು ಕಂದಾಯ ಇಲಾಖೆ ಅದಿಕಾರಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅದಿಕಾರಿಗಳಿಗೆ ಎಚ್ಚರಿಸಿದ್ದರು ವಿಷಯ ತಿಳಿದ ಅಧಿಕಾರಿಗಳು ಒತ್ತುವರಿಯಾದ ಕೆರೆಯನ್ನು ಸರ್ವೆ ಮಾಡುವ ಮೂಲಕ ಇಂದು ಇಟಾಚಿಗಳ ಮೂಲಕ ತೆರವುಕಾರ್ಯ ಕೈಗೊಂಡಿದ್ದು ಸಾರ್ವಜನಿಕರ ವಲಯದಲ್ಲಿ ಅಧಿಕಾರಿಗಳ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

2 thoughts on “ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಒತ್ತುವರಿ, ಮಾನವ ಹಕ್ಕುಗಳ ಹೋರಾಟ ಸಮಿತಿಗೆ ಸಂದ ಜಯ.”
  1. ನಿಮ್ಮ ಸುದ್ದಿ ಪತ್ರಿಕೆಯನ್ನು ನಾವು ಗೌರವಿಸುತ್ತೇವೆ. ಆದರೆ ದಯವಿಟ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ರಾಜಕೀಯಕ್ಕೆ ಬಿದ್ದು ನಿಮ್ಮ ಪ್ರತಿಷ್ಠೆಯನ್ನು ಹಾಳು ಮಾಡಿಕೊಳ್ಳಬೇಡಿ. ಈ ಪ್ರಕಟಣೆಯು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ.

    1. ನಿಮ್ಮ ಸಲಹೆಗೆ ಧನ್ಯವಾದಗಳು, ಯಾವ ಪ್ರಕಟಣೆ ಸುಳ್ಳು ಮತ್ತು ಆಧಾರರಹಿತವಾಗಿದೆ.?

Leave a Reply

Your email address will not be published. Required fields are marked *

You missed