ಆಲೂರು : ಮೊಟ್ಟ ಮೊದಲ ಬಾರಿಗೆದಲಿತ ಸಂಘಟನೆ ಸಮಿತಿ ಮಗ್ಗೆ ಇವರ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ!ಬಿ ಆರ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚೇತನ್ ಹಾಗೂ ತಾಲ್ಲೂಕು ಅಧ್ಯಕ್ಷ ಅಶೋಕ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಬೆಳ್ಳಿ ಸರೋಟಿನಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಮಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಾದ್ಯಗೋಷ್ಠಿಯೊಂದಿಗೆ ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು ಡಾ ಬಿ ಆರ್ ಅಂಬೇಡ್ಕರ್ ರವರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ ವಿಶ್ವಕಂಡ ಮಹಾನಾಯಕ ಇಡೀ ವಿಶ್ವಕ್ಕೆ ಸಂವಿದಾನವನ್ನು ಕೊಟ್ಟುವರು ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ..! ಎಂಬ ತಮ್ಮ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು, ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುವವರೆಗಿನ ಬೃಹತ್‌ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಇವರು.

ಇಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜನ್ಮದಿನ. ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ. ಅವರನ್ನು ಗೌರವಿಸುವ ಸುದಿನ. ಇಂದಿನ ಪ್ರಜೆಗಳು ಅವರ ಸಂದೇಶಗಳನ್ನು ತಿಳಿದು, ಸದಾ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚೇತನ್ ಶಾಂತಿಗ್ರಾಮ ಮಾತಾನಾಡಿ ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಬೃಹತ್‌ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿರುವುದು ಎಂದು ತಿಳಿಸಿದರು..

ಚೇತನ್ ಅಹಿಂಸಾ ಮಾತಾನಾಡಿ ನಾಡುಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿಯೂ, ಎಲ್ಲರ ಜೀವನಕ್ಕೆ ಆದರ್ಶ ಹಾಗೂ ಮಾರ್ಗ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಸ್ಮರಣಾರ್ಥ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಂಬೇಡ್ಕರ್ ರವರು ವಿಶ್ವ ಜ್ಞಾನದ ಸಂಕೇತವಾಗಿದ್ದಾರೆ.ಅಸಮಾನತೆಯನ್ನು ಅರಿತು, ಸಮಾಜದಲ್ಲಿಸಮಾನತೆ ಎಲ್ಲರಿಗೂ ಸಿಗಬೇಕು. ಮಹಿಳೆಯುಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹಿಂದೂ ಕೋಡ್ಲಿಲ್ ಲೋಕಸಭೆಯಲ್ಲಿ ಮಂಡನೆಯಾಗದಿದ್ದಕ್ಕೆ ಕಾನೂನು ಸಚಿವ ಹುದ್ದೆಯನ್ನು ತ್ಯಜಿಸಿದರು. ಶೋಷಿತರು ದಲಿತ ಸಮುದಾಯಗಳುನನ್ನಂತೆ ವಿದ್ಯಾವಂತರಾಗಿ ಉತ್ತಮ ಬದುಕನ್ನು ನಡೆಸಬೇಕೆಂಬ ಕನಸನ್ನ ಕಂಡಿದ್ದರು. ಬಲಿಷ್ಠವಾದಭಾರತವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬೇಕೆಂಬ ಹಂಬಲ, ತುಡಿತ ಅವರಲ್ಲಿತ್ತು ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಅಶೋಕ್ ನವಿಲಹಳ್ಳಿ ಮಾತಾನಾಡಿ ಮೊಟ್ಟ ಮೊದಲಬಾರಿಗೆ ಮಗ್ಗೆ ಗ್ರಾಮದಲ್ಲಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ನಮ್ಮ ಸಂಘಟನೆಯ ಮೂಲ ಉದ್ದೇಶ ಮಕ್ಕಳು ಕೂಡ ಬಾಬಾ ಸಾಹೇಬರಂತೆ ದೊಡ್ಡ ವ್ಯಕ್ತಿಗಳಾಗಿ ಬೆಳೆಯಬೇಕೆಂಬುದು ನಮ್ಮೆಲ್ಲರ ಆಶಯ ಅಂಬೇಡ್ಕರ್ ರವರ ಆಶಯದಂತೆ ಅಂಬೇಡ್ಕರ್ ರವರು ಪುಸ್ತಕ ಪ್ರೇಮಿಯಾಗಿದ್ದರು ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಬಡ ವಿದ್ಯಾವಂತ ಮಕ್ಕಳಿಗೆ ಉಚಿತ ನೋಟುಬುಕ್ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗುರುತಿಸಿ ಸನ್ಮಾನಿಸಿ ಗೌರವ ನೀಡಿ ಅವರಂತೆ ಇವರು ಕೂಡ ಇನ್ನೂ ಉನ್ನತ ಮಟ್ಟಕ್ಕೆ ತಮ್ಮ ಜೀವನ ರೂಪಿಸಿಕೊಳ್ಳುಬೇಕೆಂದು ನಮ್ಮ ಅಭಿಲಾಷೆ

ಈ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ನನ್ನ ಬೆನ್ನೆಲುಬಾಗಿ ಶಕ್ತಿ ನೀಡಿ ಸಹಕರಿಸಿದ ನಮ್ಮ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ನಾನು ಅಭಿನಂದನೆ ಸಲ್ಲಿಸುತ್ತೇನೆ ಹಾಗೆಯೇ ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಅಂಬೇಡ್ಕರ್ ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿದ್ದು ನಿಮ್ಮೆಲ್ಲರ ಸಹಕಾರ ಬೆಂಬಲ ನೀಡಬೇಕಾಗಿ ತಿಳಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *