
ದುಬೈ : ಒಕ್ಕಲಿಗರ ಸಂಘದ ವತಿಯಿಂದ ದುಬೈ ನಲ್ಲಿ ಆಯೋಜಿಸಲಾಗಿದ್ದ ಕುವೆಂಪು ಉತ್ಸವ ಮತ್ತು ವಿಶ್ವ ಒಕ್ಕಲಿಗರ ವೈಭವ ಸಮಾರಂಭವನ್ನು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ್ ಸ್ವಾಮೀಜಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ್ ಸ್ವಾಮೀಜಿ , ದುಬೈ ಉದ್ಯಮಿ ಬು.ಅಬ್ದುಲ್ಲಾ, ಮಡಿಕೇರಿ ಶಾಸಕರಾದ ಮಂತರ್ ಗೌಡ, ಮಂಡ್ಯ ಶಾಸಕ ರವಿ ಗಾಣಿಗ, ಚಿಕ್ಕಮಂಗಳೂರು ಶಾಸಕ ಸಿ ಟಿ ರವಿ, ಕುವೆಂಪು ಅವರ ಮೊಮ್ಮಗಳು ತಾರಿಣಿ,ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಶ್ಮಿ ನಂದಕಿಶೋರ್, ಉಪಾಧ್ಯಕ್ಷರಾದ ಗೋಕುಲ್ ಗೌಡ, ಪ್ರಧಾನ ಕಾರ್ಯದರ್ಶಿಯಾದ ಶೋಭಾ ಪ್ರದೀಪ್, ದುಬೈ ಒಕ್ಕಲಿಗರ ಸಂಘದ ನಿರ್ದೇಶಕರಾದ ಗ್ಯಾರಹಳ್ಳಿ ಸತೀಶ್ ಗೌಡ, ಆಲೂರು ಯತೀಶ್,ಸೇರಿದಂತೆ ಇತರರು ಹಾಜರಿದ್ದರು


