ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ನಾಡ ಕಚೇರಿಯಲ್ಲಿ ಸರಿಯಾದ ಸಂಖ್ಯೆಯ ಗ್ರಾಮ ಲೆಕ್ಕಾಧಿಕಾರಿಗಳು (VA) ಇಲ್ಲದೆ. ಹೋಬಳಿಯ ರೈತರು ,ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ನಾಡ ಕಚೇರಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿಲೇಜ್ ಅಕೌಂಟೆಂಟ್ ಇದ್ದು ಹೋಬಳಿಯ ರೈತರು, ಹಾಗೂ ಗ್ರಾಮಸ್ಥರು ತಮ್ಮ ನಾಡಕಚೇರಿಯ ಕೆಲಸ ಮಾಡಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಹೆತ್ತೂರು ನಾಡಕಛೇರಿಯಲ್ಲಿ ಒಬ್ಬ ವಿಲೇಜ್ ಅಕೌಂಟೆಂಟ್ ಗೆ ಮೂರು ಸರ್ಕಲ್ ಜೊತೆಗೆ , ರೆವೆನ್ಯೂ ಇನ್ಸ್ಪೆಕ್ಟರ್ ಹುದ್ದೆಯ ಉಸ್ತುವಾರಿ ನೀಡಿದ್ದು, ಪ್ರತಿ ದಿನ ಕಚೇರಿ ಕೆಲಸವಲ್ಲದೆ ಮೂರು ಸರ್ಕಲ್ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಬೇಟಿ ಹಾಗೂ ಮಳೆ ಹಾನಿಯಿಂದ ಉಂಟಾದ ಅನಾಹುತಗಳ ಸ್ಥಳಪರಿಶೀಲನೆಗೆ ಬೇಟಿ ನೀಡಬೇಕಾದ ಜವಾಬ್ದಾರಿ ಜೊತೆಗೆ ರೆವಿನ್ಯೂ ಇನ್ಸ್ಪೆಕ್ಟರ್ ಹುದ್ದೆಯನ್ನು ಕೂಡ ನಿಭಾಯಿಸುವ ಜವಾಬ್ದಾರಿಯುವುದರಿಂದ ಹಳ್ಳಿಯ ರೈತರ ಸಮಸ್ಯೆಗೆ ಸ್ಪಂದಿಸುದು ಕಷ್ಟ ಆಗಿದೆ .ಇದರಿಂದ ನಾಡಕಚೇರಿಯ ವ್ಯಾಪ್ತಿಗೆ ಬರುವ ಹಳ್ಳಿಗಳ ರೈತರು ಪ್ರತಿದಿನ ನಾಡಕಚೇರಿಯಲ್ಲಿ ಕಾಯುತ್ತಾ ಕುಳಿತಿರಬೇಕಾದ ಪರಿಸ್ಥಿ ಎದುರಾಗಿದೆ.

ಇದರಿಂದ ದೂರದ ಹಳ್ಳಿಯಿಂದ ಕೆಲಸ ಬಿಟ್ಟು ನಾಡ ಕಚೇರಿ ಗೆ ಬಂದು ಬೆಳಗಿಂದ ಸಂಜೆ ತನಕ ಕಾಯುತ್ತ ಕೂರುವ ರೈತರ ಪರಿಸ್ಥಿ ಪ್ರತಿದಿನ ಹೆಚ್ಚುತ್ತಿದ್ದು ಈ ಸಮಸ್ಯೆಯಿಂದ ಪ್ರತಿ ದಿನ ಕೆಲಸ ಆಗದೆ ಹಿಡಿ ಶಾಪ ಹಾಕಿ ಹೋಗುವಂಥ ರೈತರ ಪರಿಸ್ಥಿತಿ ನೋಡಿ ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಾಲೂಕು ತಹಸಿಲ್ದಾರರು ಕೂಡಲೇ ಗಮನಹರಿಸಿ ಈ ಭಾಗದ ರೈತರು ಪ್ರತಿದಿನ ನಾಡ ಕಚೇರಿ, ಮುಂದೆ ಕುಳಿತು ಕಾಯುವ ಪರಿಸ್ಥಿತಿ ಇನ್ನೂ ಮುಂದೆ ನಿಲ್ಲುವಂತಾಗಬೇಕೆಂದು. ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *