ಸಕಲೇಶಪುರ. ಸಕಲೇಶಪುರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ದೋಣಿಗಲ್ ಸಮೀಪ ಇರುವ ರಸ್ತೆ ಕುಸಿದಿದೆ ಹಾಗೆ ಇಂದು ರಾತ್ರಿ ಆನೆಮಹಲ್ ನ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ನ ಹತ್ತಿರ NH75 ರಸ್ತೆ ಮಾಡಲು ಮಣ್ಣು ತೆಗೆದ ಕಾರಣ ಗುಡ್ಡದಿಂದ ಬಂಡೆಗಳು ಹಾಗೂ ವಿದ್ಯುತ್ ಕಂಬಗಳು ಬೀಳುವ ಸಂಭವವಿದೆ ಎಂದು ಮಲೆನಾಡು ರಕ್ಷಣಾ ಸೇನೆ ಆರೋಪಿಸಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿಸುವುದಾಗಿ ಭರವಸೆ ನೀಡಿದರು.

ಈ ಹಿಂದೆ ನಮ್ಮ ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಜಾಗೃತಿ ಮೂಡಿಸಿ ತಾಲ್ಲೂಕು ಆಡಳಿತಕ್ಕೆ ಸಂದೇಶವನ್ನು ನೀಡಲಾಗಿತ್ತು ಅದೇನೆಂದರೆ ಮುಂದಿನ ದಿನಗಳಲ್ಲಿ ಸಕಲೇಶಪುರದ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿ ಗುಡ್ಡ ಕುಸಿದು ಸಾರ್ವಜನಿಕರಿಗೆ ತೊಂದರೆ ಆದಲ್ಲಿ ಅದಕ್ಕೆ ತಾಲ್ಲೂಕು ಆಡಳಿತವೇ ನೇರೆ ಹೊಣೆ ಎಂದು. ಇಂದು ಆ ರೀತಿಯ ವಾತಾವರಣ ಆನೆಮಹಲ್ ನ ಬಳಿ ಆಗಿದೆ.

ವಿದ್ಯುತ್ ಕಂಬ ಇನ್ನೇನು ನೆಲಕ್ಕುರುಳುವ ಪರಿಸ್ಥಿತಿ ಎದುರಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ತಾಲ್ಲೂಕು ಆಡಳಿತ ವರ್ಗ ಇನ್ನೇನು ಕೆಲವೇ ಕ್ಷಣದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಸಾಗರ್ ಜಾನೇಕೆರೆ, ಮಲೆನಾಡು ರಕ್ಷಣಾ ಸೇನೆ ಸಕಲೇಶಪುರ ತಾಲ್ಲೂಕು ಉಪಾಧ್ಯಕ್ಷರು ತೆಜೇಷ್ ಗೌಡ ಸುಳ್ಳಕ್ಕಿ, ಕಾಂಗ್ರೆಸ್ ಮುಖಂಡ ನದೀಮ್, ಚೇತನ್ ಶೆಟ್ಟಿ , ವಿನಯ್ ಇತರರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *