
ಆಲೂರು : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಲೂರು ತಾಲೂಕಿನಲ್ಲಿ ಬಾಲಕರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ಇದ್ದು. ಈ ಮೊದಲು ಇದ್ದ ಹಳೆಯ ಕಟ್ಟಡವನ್ನು ಕೆಡವಿ ಕೆ ಕುಮಾರಸ್ವಾಮಿ ಅವರು ಶಾಸಕರಿದ್ದ ಸಮಯದಲ್ಲಿ ನೂತನ ಕಠಿಣವನ್ನು ನಿರ್ಮಿಸಲಾಗಿದೆ ಮೆಟ್ಟಿದ್ ಪೂರ್ವ ಬಾಲಕರ ಹಾಸ್ಟೆಲ್ ನಲ್ಲಿ 45 ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ನಲ್ಲಿ 45 ವಿದ್ಯಾರ್ಥಿಗಳು ಇರುತ್ತಾರೆ ಆದರೆ ಹಾಸ್ಟೆಲ್ ನ ಸುತ್ತಮುತ್ತಲ ವಾತಾವರಣ ಮಾತ್ರ ಕಲುಷಿತ ವಾಗಿದೆ ಹಾಸ್ಟೆಲ್ ಹಿಂಬಾಗದಲ್ಲಿ ರಾಶಿಗಟ್ಟಲೆ ಬಿದ್ದಿರುವ ಕಸದ ಗುಡ್ಡೆ ಹೊಳೆತು ನಾರುತ್ತಿರುವ ಬಟ್ಟೆಗಳು ಕಣ್ಣಿಗೆ ರಾಚುವಂತಿವೆ ಇಷ್ಟಾದರೂ ಕೂಡ ಅಧಿಕಾರಿಗಳು ಇತ್ತ ಗಮನ ಕೊಡದೆ ಸುಮ್ಮನೆ ಕುಳಿತಿದ್ದಾರೆ ನಮ್ಮ ತಂಡ ಭೇಟಿ ಕೊಟ್ಟ ಸಮಯದಲ್ಲಿ ಯಾವುದೇ ಅಧಿಕಾರಿಗಳು ಕೂಡ ಹಾಸ್ಟೆಲಲ್ಲಿ ಇರಲಿಲ್ಲ ಅವರನ್ನು ದೂರವಾಣಿ ಸಂಪರ್ಕಿಸಿದ್ದು ಸ್ವಲ್ಪ ತಡವಾಗಿ ಬರುವುದಾಗಿ ತಿಳಿಸಿದ್ದಾರೆ.
ಕ್ಲಾಸ್ ಹಾಸ್ಟೆಲ್ ನಲ್ಲಿ ಕೆಲಸ ಮಾಡುವ ಅರೆಕಾಲಿಕ ನೌಕರರಿಗೆ ಸರಿಯಾಗಿ ಸಂಬಳ ದೊರೆಯುತ್ತಿಲ್ಲ ಎರಡು ಮೂರು ತಿಂಗಳಿಗೊಮ್ಮೆ ಸಂಬಳ ಸಿಗುತ್ತದೆ ಕೆಲವೊಂದು ಖಾಸಗಿ ಏಜೆನ್ಸಿ ಗಳು ಅವರನ್ನು ನೇಮಕ ಮಾಡಿಕೊಂಡು ಸರ್ಕಾರಿ ಇಂದ ಬರುವ ಸಂಬಳವನ್ನು ನೇರವಾಗಿ ಕೆಲಸಗಾರರಿಗೆ ಹಾಕದೆ ಅದರಲ್ಲೂ ಸಹ ಕೆಲಸಗಳಿಗೆ ಮೋಸವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು




