ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಭಾಗದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು , ವಾಹನ ಸವಾರರ ಪರದಾಡುವಂತಾಗಿದೆ
ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು ಕಳೆದ ಎರಡು ದಿನಗಳಿಂದಲೂ ಸಕಲೇಶಪುರ ಭಾಗದಲ್ಲಿ ಭಾರಿ ಮಳೆ ಅಗಿದೆ ಭಾರಿ ಮಳೆಗೆ ತುಂಬಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆ ಹಿನ್ನಲೆಯಲ್ಲಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಹೇಮಾವತಿ ಜಲಾಶಯದ ಇಂದಿನಿ ನೀರಿನ ಮಟ್ಟ 6752 ಕ್ಯೂಸೆಕ್ ಒಳಹರಿವು ಇದೆ.
ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿಗಳು
ಜಲಾಶಯದ ಇಂದಿನ ಮಟ್ಟ – 2895.30 ಅಡಿಗಳು
ಗರಿಷ್ಠ ನೀರಿನ ಸಂಗ್ರಹ ಪ್ರಮಾಣ- 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ ಪ್ರಮಾಣ – 12.664 ಟಿಎಂಸಿ
ಒಳಹರಿವು – 6752 ಕ್ಯೂಸೆಕ್ ಹೊರಹರಿವು – 200 ಕ್ಯೂಸೆಕ್