👉👉👉ಅದೃಷ್ಟಾವಶ ಪ್ರಾಣಪಾಯ ದಿಂದ ಪಾರದ ಚಾಲಕ ಕಾಳಯ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು.
ಸಕಲೇಶಪುರ : ಸಕಲೇಶಪುರ ತಾಲೂಕಿನ ಸುಂಡೆಕೆರೆ ಕೆಲಗಳಲೆ ನಿವಾಸಿ ಆಟೋ ಚಾಲಕ ಸುಂಡೇಕೆರೆ ಬಳಿಯ ಉದೇವಾರ ಕಾಂಕ್ರೀಟ್ ರಸ್ತೆಯಲ್ಲಿ ಬರುವಾಗ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಮರ ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂ ಗೊಂಡಿದ್ದು ಆಟೋ ಚಾಲಕ ಕಾಳಯ್ಯನವರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ಅದೃಷ್ಟಾವಶ ಪ್ರಾಣಪಾಯದಿಂದ ಪಾರಾಗಿದ್ದಾರೆ
ತಕ್ಷಣ ಸಾರ್ವಜನಿಕರ ನೆರವಿನಿಂದ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.ವಿಷಯ ತಿಳಿದ ತಕ್ಷಣ ಮಲೆನಾಡು ಆಟೋ ಚಾಲಕರ ಸಂಘದ ಅಧ್ಯಕ್ಷ ಪುಟ್ಟರಾಜು ರವರು ತಕ್ಷಣ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ.
ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿದ ಅಪಾರ ತಹಸಿಲ್ದಾರ್ ಘಟನೆ ವಿವರಗಳನ್ನು ಪಡೆದುಕೊಂಡು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು ನಂತರ ವರದಿಯನ್ನು ತಾಲೂಕು ಆಡಳಿತದಿಂದ ಜಿಲ್ಲಾಡಳಿತಕ್ಕೆ ಕಳಿಸಿ ಸೂಕ್ತ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ, ರಾಜ್ಯ ಯುವಘಟಕ ಅಧ್ಯಕ್ಷ ಕೃತಿ ವರ್ಮ, ತಾಲ್ಲೂಕು ಉಪಾಧ್ಯಕ್ಷ ತೇಜೇಷ್ ಗೌಡ ಸುಳ್ಳಕ್ಕಿ, ತಾಲ್ಲೂಕು ಉಸ್ತುವಾರಿ ಚಂದ್ರಶೇಖರ್ ಸುಳ್ಳಕ್ಕಿ, ಆಟೋ ಚಾಲಕರು, ಮಲೆನಾಡು ರಕ್ಷಣಾ ಸೇನೆಯ ಪದಾಧಿಕಾರಿಗಳು ಮತ್ತು ಇತರರು ಹಾಜರಿದ್ದರು.