ಬಿ.ಜಿ.ಎಸ್. ವಿಎಸ್ ಐಟಿ ಪ್ರೊಫೆಶನಲ್ಸ್ ಟ್ರಸ್ಟ್ ಇವರಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೆತ್ತೂರಿಗೆ ಉಚಿತವಾಗಿ ಶೈಕ್ಷಣಿಕ ಸಲಕರಣೆಗಳ ಹಸ್ತಾಂತರ ಸಮಾರಂಭವು ದಿನಾಂಕ 22/07/2023ನೇ ಶನಿವಾರದಂದು ಪೂರ್ವಾಹ್ನ 11.00ರಿಂದ ಜರುಗಲಿದೆ.

ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಚಿನ್ ಹೆಚ್.ಎಂ.ಉಪಾಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಬಿಜಿಎಸ್ ವಿಎಸ್ ಐಟಿ ಪ್ರೊಫೆಷನಲ್ ಟ್ರಸ್ಟ್ ನ ಅಧ್ಯಕ್ಷ ಮುತ್ತುರಾಜ್ ಭಾಗವಹಿಸಲಿದ್ದಾರೆ.

ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ವೇದವತಿ ಕೆ., ಶ್ರೀಮತಿ ಲತಾ.ಬಿ.ಕೆ. ಉಪ ಪ್ರಾಂಶುಪಾಲರು ಉಪಸ್ಥಿತರಿರಲಿದ್ದಾರೆ.

ಆದಿ ಚುಂಚನಗಿರಿ ಮಠದ ಪೀಠಾಧಿಪತಿಯಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದೀಕ್ಷಾ ದಿನದ ಭಾಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *