ಸಕಲೇಶಪುರದಲ್ಲಿ 30.ಜೂನ್ 01 ಜೂಲೈ ರಂದು ಅಘೋಷಿತ ಕರ್ಫ್ಯೂ ರೀತಿ ವಾತಾವರಣ ಸೃಷ್ಟಿಸಿ ನಾಗರಿಕರು ಭಯದ ವಾತಾವರಣದಲ್ಲಿ ಇರುವ ರೀತಿ ಮಾಡಿದ್ದ ಸಕಲೇಶಪುರ DYSP ಮಿಥುನ್ ಅವರನ್ನ ಅಮಾನತ್ತು ಮಾಡಲು ಆಗ್ರಹಿಸಿ ಹಾಸನ ಜಿಲ್ಲಾದಿಕಾರಿಗಳ ಕಚೇರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆನಡೆಸಲಾಯಿತು

DYSP ಮಿಥುನ್ ಅವರು ರಾಷ್ಟ್ರಗೀತೆಗೆ ಅಗೌರವ ತೋರಿದ ವಿರುದ್ಧವಾಗಿ ಇಂದು ಹಾಸನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ರಾಷ್ಟಗೀತೆ ಹಾಡುವ ಮೂಲಕ ವಿನೂತಾನರಿತಿ ಪ್ರತಿಭಟನೆ ಮಾಡಲಾಯಿತು

ಪ್ರತಿಭಟನೆ ನೇತೃತ್ವ ಚಿಕ್ಕಮಗಳೂರು ಯೂವ ಮೋರ್ಚಾ ತಂಡ ವಹಿಸಿತ್ತು.

ದಿನಾಂಕ. 1.07.23 ರಂದು ಮೂಡಿಗೆರೆ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷರಾದ ಅವಿನಾಶ ಅವರನ್ನ ಯಾವದೇ Serch Warent ಅಥವಾ FIR ತರದೆ ಏಕಾಏಕಿ ಅವಿನಾಶ್ ಮನೆಗೆ ನುಗ್ಗಿ ವಯಸ್ಸಾದ ತಾಯಿಯನ್ನು ದೂಡಿ ಹಾಕಿ ತಂಗಿಗೆ ಅವ್ಯಾಚ ಶಬ್ದಗಳಿಂದ ಬೈದು ಸಕಲೇಶಪುರ ಠಾಣೆಗೆ ಕರೆತಂದು ಹಿಂಸೆ ನೀಡಿದ್ದರು ಸಕಲೇಶಪುರ ಪೊಲೀಸನವರು.

•ಸಕಲೇಶಪುರ DYSP ಮಿಥುನ್ ಶಾರೀರಿಕವಾಗಿ ಹಿಂಸೆ ಕೊಟ್ಟು ನಂತರ ನೀನು ರಾಷ್ಟ್ರವಾದಿ ಅಲ್ಲವಾ ರಾಷ್ಟ್ರಗೀತೆ ಹೇಳು ನಾಡಗೀತೆ ಹೇಳು ಎಂದು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ.

ಅವಿನಾಶ್ ಅವರು ರಾಷ್ಟ್ರಗೀತೆ ಹಾಡಿದಾಗ ರಾಷ್ಟ್ರಗೀತೆಗೆ ಗೌರವ ಕೊಡದೆ ತನ್ನ ಟಬೇಲ್ ಮೇಲೆ ಕಾಲು ಹಾಕಿ ಕೂತಿರುತ್ತಾರೆ. ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನವಾಗಿದ್ದು ಆದ್ದರಿಂದ ಇಂದು ಹಾಸನ S.P ಕಚೇರಿ ಎದುರು ರಾಷ್ಟ್ರಗೀತೆಯನ್ನು ಹಾಡಿ ಸುರಿದ ಮಳೆಯಲ್ಲೂ ಕಾರ್ಯಕರ್ತರು ಅಲುಗಾಡದೆ ಗೌರವ ಸಲ್ಲಿಸಿದರು.

ಇದಕ್ಕೂ ಮೊದಲು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಉದ್ದೇಶಿಸಿ ಚಿಕ್ಕಮಗಳೂರು ಜಿಲ್ಲೆ ಯೂವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟಿಯನ್ ಮಾತನಾಡಿ ನಾವು ಸರ್ಕಾರದ ನಿಲುವು ಏನೆ ಇರಲಿ ಕಾರ್ಯಕರ್ತರನ್ನ ಬಿಟ್ಟು ಕೊಡುವ ಪ್ರಶ್ನೆ ಇಲ್ಲ ಎಂದು ಹೇಳಿದರು. ಕಾರ್ಯಕರ್ತರು SP ಅಣ್ಣಾಮಲೈ ಮತ್ತು ಮಧುಕರ್ ಶೆಟ್ಟಿ ಅವರಂಥ ದಕ್ಷ ಅದಿಕಾರಿಗಳನ್ನ ನೋಡಿ ಬೆಳೆದವರು ನಾವು ಮತ್ತು ಮಿಥುನ್ ಪ್ರಜಾಪ್ರಭುತ್ವದ ವಿರೋಧಿ ಆಗಿದ್ದು ತಕ್ಷಣ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು

ಹಾಸನದ ಮಾಜಿ ಶಾಸಕರಾದ ಶ್ರೀ ಪ್ರೀತಂಗೌಡ ಅವರು ಮಾತನಾಡಿ ಸರ್ಕಾರ ಬದಲಾಗಿದ್ದು ಸರಿ ಪೊಲೀಸ್ ಅಧಿಕಾರಿಗಳ ಮಾನಸಿಕತೆ ಬದಲಾವಣೆ ಆಗಬಾರದು ಎಂದು ತಿಳಿಸಿದರು. ಪೊಲೀಸ್ SP ಅವರಿಗೂ ಕೂಡ ಕಾರ್ಯಕರ್ತನ ಮನೋಬಲ ಕುಗ್ಗಿಸುವ ಕಾರ್ಯ ಮಾಡಬಾರದು ಮತ್ತು ಜನಸ್ನೇಹಿ ಆಗಿ ಇರಬೇಕು ಮಿಥುನ್ ಅವರ ಮೇಲೆ ವಿಚಾರಣೆ ಮಾಡಬೇಕು ಎಂದು ಸೂಚಿಸಿದರು ಬಿಜೆಪಿ ಸರ್ಕಾರ ಇದ್ದಾಗ ಯಾವದೇ ಒತ್ತಡ ಇಲ್ಲದೆ ಕೆಲಸ ಮಾಡಿದ್ದೀರಾ ಅದೇ ರೀತಿ ನ್ಯಾಯಪರವಾಗಿ ಕೆಲಸ ಮಾಡಿ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಹರ್ಷಿತ್, ಚಿಕ್ಕಮಗಳೂರು ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಶಶಿ ಅಲ್ದುರ್, ಪುನೀತ್ , ಇಂದಾವರ ಯತೀಶ್, ಜಿಲ್ಲಾ ಉಪಾಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ಮೂಡಿಗೆರೆ ಬಜರಂಗದಳ ಸಂಯೋಜಕ ಅಜಿತ್ ಸಹ ಸಂಯೋಜಕ ಸಂತೋಷ್, ಜನ್ನಾಪುರ ಅಭಿಲಾಷ, ಮೂಡಿಗೆರೆ VHP ಅಧ್ಯಕ್ಷರಾದ ಸಾಲಮರ ಮಹೇಶ್, ಆಕಾಶ್. ಹಾಸನ ಜಿಲ್ಲೆ ಕಾರ್ಯದಕ್ಷರಾದ ಲೋಹಿತ್, ಹಾಸನ ಜಿಲ್ಲೆ ಯುವ ಮೋರ್ಚಾ ಅಧ್ಯಕ್ಷ ಲೀಕಿತ್, ನಗರ ಅಧ್ಯಕ್ಷರಾದ ವೇಣು ಕುಮಾರ್ ಸಕಲೇಶಪುರ ಯುವ ಮೋರ್ಚಾ ಉಪಾಧ್ಯಕ್ಷ ಪುನೀತ್,ಸಕಲೇಶಪುರ ಬಜರಂಗದಳ ಸಂಘಟನೆ ಪ್ರಮುಖರಾದ ಮಂಜುನಾಥ ಸಿದ್ದಾಪುರ, ರಾಜೇಶ, ಶೇಖರ್ ಕೆಂಪೆನ್ಹಾಲ್ ದೇವಾಲಕೆರೆ ಪ್ರಸನ್ನ, ಶಶಿ, ಅಜಿತ್ ಇತರರು ಉಪಸ್ಥಿತಿ ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *