ಜುಲೈ 21 ರ ಶುಕ್ರವಾರದಂದು ತಾಲೂಕಿನ ಸುಂಡಕೆರೆ ಹತ್ತಿರ ಉದೆವಾರ ರಸ್ತೆಯಲ್ಲಿ ಚಲಿಸುತ್ತಿದ್ದ. ಆಟೋದ ಮೇಲೆ ಏಕಾಏಕಿ ರಸ್ತೆ ಬದಿಯಲ್ಲಿರುವ ತೋಟದ ಮರವೊಂದು ಬೃಹತ್ ಗಾತ್ರದ ಕೊಂಬೆಯೊಂದು ಬಿದ್ದು ಚಾಲಕನಿಗೆ ಗಂಭೀರ ಗಾಯಗಳಾಗಿವೆ
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಘಟನೆಯನ್ನು ಉದ್ದೇಶಿಸಿ ಪ್ರತಕ್ರಿಯೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷರಾದ ರಮೇಶ್ ಪೂಜಾರಿ ಅವರು ಎಲ್ಲ ತೋಟದ ಮಾಲೀಕರಲ್ಲಿ ಮನವಿ ಮಾಡಿಕೊಂಡಿದ್ದು
ನಮ್ಮ ಮಲೆನಾಡು ಭಾಗದಲ್ಲಿ ಅತಿಯಾದ ಗಾಳಿ ಮಳೆ ಹೆಚ್ಚಾಗಿ ಬರುವ ಕಾರಣ ಮಳೆಗಾಲದಲ್ಲಿ ಗೆರೆಭಾಗದಲ್ಲಿರುವ ತೋಟದ ಮರಳು ರಸ್ತೆಗೆ ಬಾಗಿರುವ ಎಲ್ಲ ಮರದ ಗೊಂಬೆಗಳನ್ನು ದಯಮಾಡಿ ಕೂಡಲೇ ತೆಗೆಯಬೇಕು ಏಕೆಂದರೆ ಆ ರಸ್ತೆಯಲ್ಲಿ ಹಲವು ಶಾಲಾ ವಾಹನಗಳು ಆಟೋರಿಕ್ಷಗಳು ಸರಕಾರಿ ಬಸ್ ಸೇರಿದಂತೆ ಸಾರ್ವಜನಿಕರು ಸಂಚರಿಸುತ್ತಾರೆ
ಒಂದು ವೇಳೆ ಏನಾದರೂ ದುರ್ಘಟನೆ ನಡೆದು ಪ್ರಾಣಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಹಾಗೆ ಅರಣ್ಯ ಇಲಾಖೆಯವರು.. ಸಕಲೇಶಪುರ ದಿಂದ ಗಡಿ ಚೌಡಮ್ಮ ದೇವಸ್ಥಾನದ ವರೆಗೂ ರಸ್ತೆ ಬದಿಯಲ್ಲಿ ತುಂಬ ಮರದ ರಂಬೆಗಳು ರಸ್ತೆಗೆ ಬಾಗಿ ಅಮಾಯಕರ ಜೀವ ಪಡೆಯಲು ಆಹ್ವಾನಿಸುತ್ತಿದ್ದು ಅವಘಡ ಸಂಭವಿಸುವ ಮುನ್ನ ತತ್ವ ದಯಮಾಡಿ ಈ ಕೂಡಲೇ ರಸ್ತೆಗೆ ಬಾಗಿರುವ ಕೊಂಬೆಗಳನ್ನು ಕತ್ತರಿಸಿ ಅಮಾಯಕರ ಜೀವ ಉಳಿಸುವಂತೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.