👉👉👉ನಾಲ್ವರ ಸಾವು ಇಬ್ಬರ ಸ್ಥಿತಿ ಗಂಭೀರ!
ಆಲೂರು : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಈಶ್ವರಹಳ್ಳಿ ಬಳಿ ಶುಕ್ರವಾರ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಇನೋವಾ ಕಾರು ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ .
ಹಾಸನ ತಾಲೂಕು ಕುಪ್ಪಳ್ಳಿ ಗ್ರಾಮದ ಚೇತನ್, ಗುಡೇನಹಳ್ಳಿ ಅಶೋಕ್, ತಟ್ಟೆಕೆರೆಯ ಪುರುಷೋತ್ತಮ್, ಆಲೂರು ತಾಲೂಕಿನ ಚಿಗಳೂರು ದಿನೇಶ್, ಮೃತ ಪಟ್ಟ ದುರ್ದೈವಿ ಗಳು.ಸಕಲೇಶಪುರದಿಂದ ಹಾಸನಕ್ಕೆ ಬರುತ್ತಿದ್ದ ಇನೋವಾ ಕಾರು ಹಾಗೂ ಹಾಸನದ ಸಕಲೇಶಪುರಕ್ಕೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಆಲೂರು ಪೋಲೀಸ್ ರೂಂ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.