ಆಲೂರು : ನಗರದ ವೀರಶೈವ ಸಮುದಾಯದ ಭವನದಲ್ಲಿ ತಾಲೂಕು ವೀರಶೈವ ಸಂಘ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ SSLC ಮತ್ತು PUC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವೀರಶೈವ ಸಮಾಜದಿಂದ ಮಾಡಲಾಯಿತು .
ನಂತರ ಶಾಸಕರಾದ ಸಿಮೆಂಟ್ ಮಂಜುರವರಿಗೆ ಸನ್ಮಾನ ಮಾಡಲಾಯಿತು .ನಂತರ ಮಾತನಾಡಿದ ಸಿಮೆಂಟ್ ಮಂಜು ಶಾಸಕರಾನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಕಲಪುರ ಮಠದ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಸ್ವಾಮೀಜಿಯಾದ ಸದಾಶಿವಶಿವಾಚಾರ್ಯ ಸ್ವಾಮೀಜಿ ಸಮಾಜ ಸೇವಕರಾದ ಸಿದ್ದೇಶ್ ನಾಗೇಂದ್ರ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ರೇಣುಕಾ ಕುಮಾರ್,ಇನ್ನಿತರ ಮುಖಂಡರು ಇದ್ದರು.